ಮಂಗಳೂರು: ಅಮೃತ ಸೋಮೇಶ್ವರರ ನಿಧನ ಸಾಹಿತ್ಯ, ಸಾಂಸ್ಕೃತಿಕ, ಜಾನಪದ, ಯಕ್ಷಗಾನ, ಸಂಶೋಧನ ಲೋಕಕ್ಕೆ ತುಂಬಲಾರದ ನಷ್ಟ. ಐದು ದಶಕಗಳಿಂತಲೂ ಅಧಿಕ ವರ್ಷ ನಮ್ಮ ರಾಜ್ಯದ ಸಾರಸ್ವತ ಲೋಕದಲ್ಲಿ ದಣಿವರಿಯದ ದುಡಿಮೆ ಮಾಡಿದವರು. ವಿಶೇಷವಾಗಿ ಅವಿಭಜಿತ ದ ಕ ಜೆಲ್ಲೆಯ ಅಪೂರ್ವ ಸಾಧಕರು.
ಸಾಹಿತ್ಯದ ಸರ್ವ ಪ್ರಕಾರಗಳಲ್ಲಿ ಕೊಡುಗೆ ನೀಡಿದ, ಕೃಷಿ ಮಾಡಿದ ವಿದ್ವಾಂಸರು. ತೊಂಬತ್ತಕ್ಕಿಂತ ಅಧಿಕ ತುಳು ಸಾಹಿತ್ಯಕ ಕೃತಿಗಳನ್ನು ನೀಡಿದ, ಜೀವಪರ ಕಾಳಜಿಯ, ವಿಶಿಷ್ಟ ಪ್ರತಿಭೆಯವರಾದ ಅಮೃತ ಸೋಮೇಶ್ವರರ ನಿಧನ ಅತೀವ ದುಃಖ ತಂದಿದೆ. ಮೃತರ ಆತ್ಮಕ್ಕೆ ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿರಶಾಂತಿ ಕೋರುತ್ತದೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಡಾ. ಎಂ. ಪಿ. ಶ್ರೀನಾಥ ಅಧ್ಯಕ್ಷರು, ದ.ಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ