ಮಂಗಳೂರು: ಕೇರಳದ ನಾಯರ್ ಗಳು, ತಿಯ್ಯಗಳು ಮತ್ತು ಈಳವರು, ಹಾಗೂ ಕರ್ನಾಟಕದ ಬಂಟ್ಸ್ ಮತ್ತು ಹೊಯ್ಸಳರು ವಾಯುವ್ಯ ಭಾರತದ ಜನರಿಗೆ ತಳೀಯವಾಗಿ ಹತ್ತಿರವಾಗಿದ್ದಾರೆ, ಎಂದು ಹೈದರಾಬಾದ್ ನ CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB)ನ ಜೆಸಿ ಬೋಸ್ ಫೆಲೋ ಡಾ.ಕುಮಾರಸಾಮಿ ತಂಗರಾಜ್ ನೇತೃತ್ವದ ಸಂಶೋಧಕರ ತಂಡವು ಇತ್ತೀಚೆಗೆ ನಡೆಸಿದ ಉನ್ನತ ಮಟ್ಟದ ಜೆನೆಟಿಕ್ ಅಧ್ಯಯನದಿಂದ ತಿಳಿದುಬಂದಿದೆ. ಜೀನೋಮ್ ಬಯಾಲಜಿ ಮತ್ತು ಎವಲ್ಯೂಷನ್ ಜರ್ನಲ್ನಲ್ಲಿ ಈ ಸಂಶೋಧನೆಯನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ.
ಭಾರತದ ನೈಋತ್ಯ ಕರಾವಳಿಯ ಸಾಂಪ್ರದಾಯಿಕ ಯೋಧರು ಮತ್ತು ಊಳಿಗಮಾನ್ಯ ಸಮುದಾಯಗಳ 213 ಜನರ ಡಿ.ಎನ್.ಎ ಡಿ.ಎನ್.ಎ ಯನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಅವರು ಜೀನೋಮ್-ವೈಡ್ ಆಟೋಸೋಮಲ್ ಗುರುತುಗಳು ಮತ್ತು ಮಾತೃಸಹಜ ಮೈಟೊಕಾಂಡ್ರಿಯದ ಡಿ.ಎನ್.ಎ ಗುರುತುಗಳನ್ನು ಹುಡುಕಿ, ಕಂಚಿನ ಯುಗದಿಂದ ವರ್ತಮಾನದವರೆಗಿನ ಪ್ರಾಚೀನ ಮತ್ತು ಸಮಕಾಲೀನ ಯುರೇಷಿಯನ್ ಜನರ ಡಿ.ಎನ್.ಎ ಯೊಂದಿಗೆ ತಮ್ಮ ಫಲಿತಾಂಶಗಳನ್ನು ಹೋ ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ