ಮಂಗಳೂರು: ಉಡುಪಿ ಶ್ರೀ ಪುತ್ತಿಗೆ ಮಠ ವಿಶ್ವಗೀತಾ ಪರ್ಯಾಯೋತ್ಸವ 2024-ಮ 26 ರ ಪ್ರಯುಕ್ತ ಜನವರಿ 18ರಂದು ರಾಜಾಂಗಣದಲ್ಲಿ ನಡೆದ ಸಂಧ್ಯಾ ದರ್ಬಾರ್ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಖ್ಯಾತ ಚಾರ್ಟಡ್ ಅಕೌಂಟೆಂಟ್, ಉದ್ಯಮಿ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಅವರನ್ನು ಪರ್ಯಾಯ ದರ್ಬಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪರ್ಯಾಯ ಪೀಠವನ್ನೇರಿರುವಂತಹ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮಾತನಾಡಿ, ಡಾ. ಸಿಎ ಎ. ರಾಘವೇಂದ್ರ ರಾವ್ ಅವರಿಗೆ ಕೃಷ್ಣ ದೇವರ ಮೇಲೆ ಅಪಾರ ಭಕ್ತಿ. ಧಾರ್ಮಿಕ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ನಮ್ಮ ಲೇಖನಗಳ ವಿಶೇಷ ಅಭಿಮಾನಿಯಾಗಿ ಸದಾ ಸ್ಫೂರ್ತಿ ನೀಡುತ್ತಿರುತ್ತಾರೆ ಎಂದು ಹೇಳಿದರು.
ಪುತ್ತಿಗೆ ಪೀಠದ ಕಿರಿಯ ಯತಿಗಳಾದ ಶ್ರೀ ಸುಶೀಂದ್ರತೀರ್ಥರು, ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿಶ್ವಸ್ಥ ಸದಸ್ಯ ಎ. ವಿಜಯಲಕ್ಷ್ಮೀ ಆರ್. ರಾವ್ ಹಾಗೂ ಪ್ರೊ. ಇಆರ್. ಎ. ಮಿತ್ರಾ ಎಸ್. ರಾವ್ ಅವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ