ರಮಾನಾಥ ಹೆಗ್ಡೆ ನಿಧನಕ್ಕೆ ಸಂತಾಪ ಸೂಚಕ ಸಭೆ

Upayuktha
0

 


ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಪಳ್ಳಿ ರಮಾನಾಥ ಹೆಗ್ಡೆ ಅವರ ನಿಧನಕ್ಕೆ ದೇವಸ್ಥಾನದ ವತಿಯಿಂದ ಸಂತಾಪ ಸೂಚಕ ಸಭೆಯು ಸೋಮವಾರ ಕ್ಷೇತ್ರದ ಕಲಾಮಂಟಪದಲ್ಲಿ ನಡೆಯಿತು.



ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪಳ್ಳಿ ರಮಾನಾಥ ಹೆಗ್ಡೆ ಅವರು, ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31 ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಕಾರ್ಪೋರೇಟರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಸುಧಾಕರ್ ರಾವ್ ಪೇಜಾವರ ಅವರು ನುಡಿ ನಮನ ಸಲ್ಲಿಸಿದರು.



ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ರಘುರಾಮ ಉಪಾಧ್ಯಾಯ, ಎಸ್. ಹರೀಶ್ ಐತಾಳ್, ಎಂ. ಅರುಣ್ ಕುಮಾರ್, ಮೊಕ್ತೇಸರರಾದ ಪ್ರೇಮಲತಾ ಎಸ್.ಕುಮಾರ್, ಪರ್ಯಾಯ ಅರ್ಚಕರಾದ ಎನ್.ವಾಸುದೇವ್ ಐತಾಳ್, ಅರ್ಚಕರಾದ ಶ್ರೀನಿವಾಸ್ ಐತಾಳ್, ಹರೀಶ್ ಐತಾಳ್, ರಮಾನಾಥ ಹೆಗ್ಡೆ ಅವರ ಪುತ್ರ ಸಹಾಸ್ ಹೆಗ್ಡೆ, ಸೊಸೆ ಅವನಿ ಹೆಗ್ಡೆ, ಪುತ್ರಿ ಸುರಕ್ಷಾ ಹೆಗ್ಡೆ, ಅಳಿಯ ನಿತಿನ್ ಹೆಗ್ಡೆ, ಮೊಮ್ಮಗಳು ಇಶಾನ್ವಿ ಹೆಗ್ಡೆ, ಕ್ಷೇತ್ರದ ಸಿಬ್ಬಂದಿಯಾದ ರಂಜಿತ್, ಕೆ. ವಿನಯಾನಂದ ಮುಂತಾದವರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top