ಕರಂಬಳ್ಳಿಯಲ್ಲಿ ಪುತ್ತಿಗೆ ಶ್ರೀ: ಸಾಲಂಕೃತ ಪಲ್ಲಕ್ಕಿಯಲ್ಲಿ ಭಗವದ್ಗೀತೋತ್ಸವ

Upayuktha
0



ಕರಂಬಳ್ಳಿ: ಪದ್ಯಾಯ ಪೂರ್ವಭಾವಿಯಾಗಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳವಾರ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಿದರು. ದೇವಳದ ಆಡಳಿತ ಮೊಕ್ತೇಸರ ಮಾಜಿ ಶಾಸಕ ಕೆ ರಘುಪತಿ ಭಟ್ , ದೇವಳದ ಅರ್ಚಕರು , ಟ್ರಸ್ಟಿಗಳು ಭಕ್ತಿ ಆದರದಿಂದ ಉಭಯ ಶ್ರೀಗಳನ್ಜು ಬರಮಾಡಿಕೊಂಡರು.




ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯೋತ್ಸವವನ್ನು ಸಂಕಲ್ಪಿಸಿರುವುದರ ದ್ಯೋತಕವಾಗಿ ಶ್ರೀ ಮಠದ ಪಟ್ಟದ ದೇವರು ಮತ್ತು ಭಗವದ್ಗೀತೆ ಗ್ರಂಥಗಳನ್ನು ಸಾಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮಂಗಳರಾತಿ ಬೆಳಗಿ, ಚಂಡೆ ವಾದ್ಯ ಭಜನೆ ಸಹಿತ ದೇವಳದ ಆವರಣದಲ್ಲಿ ಭಗವದ್ಗೀತೋತ್ಸವವನ್ನು ನೆರವೇರಿಸಲಾಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top