ವಿಶ್ವಮಾನ್ಯರಾದ ವಿಶ್ವಕರ್ಮ ಅರುಣ ಯೇೂಗಿರಾಜ್

Upayuktha
0

ಶಿಲೆ ಕಲೆ ಅಂದಾಗ ನಮಗೆ ನೆನಪಾಗುವುದು ನಮ್ಮ ಪ್ರಾಚೀನ ಶಿಲ್ಪಿ ಜಕಣಾಚಾರಿಗಳು. ಈಗ ಮತ್ತೊಮ್ಮೆ ಜಕಣಾಚಾರಿಗಳ ಹೆಸರನ್ನು ನೆನಪಿಸುವಂತಹ ಹೆಸರು ರಾರಾಜಿಸುತ್ತಿರುವುದು ನಮ್ಮ ಕನ್ನಡ ನಾಡಿನ ಶಿಲ್ಪಿ ಅರುಣ ಯೇೂಗಿರಾಜ್ ಅಂದರೂ ತಪ್ಪಾಗಲಾರದು. ಅಯೇೂಧ್ಯೆಯದಲ್ಲಿ ಶ್ರೀರಾಮಚಂದ್ರ ನೆಲೆನಿಂತ ಮೇಲ್ಲಂತೂ ಯೇೂಗಿರಾಜ್ ರ ಹೆಸರು ಜಗದಗಲಕ್ಕೆ ಪಸರಿಸಿ ಬಿಟ್ಟಿದೆ. ಅವರ ಕೀರ್ತಿ ಉತ್ತುಂಗಕ್ಕೆ ಏರಿದಾಗಲೂ ಕೂಡ ಅತ್ಯಂತ ಭಕ್ತಿ ವಿನಯ ಪೂರ್ವಕವಾಗಿ ತಮ್ಮ ಕಲಾ ಪ್ರತಿಭೆಯನ್ನು ಅಭಿವ್ಯಕ್ತಿ ಪಡಿಸಿರುವುದು ಅವರ ವ್ಯಕ್ತಿತ್ವವೆಂದರೆ "ಚಿನ್ನಕ್ಕೆ ಪರಿಮಳ ಬಂದಂತಾಗಿದೆ".


ಸಾಮಾನ್ಯವಾಗಿ ನಾವು ಕಲಾಕರರನ್ನು ಅವರ ಕೆಲಸ ಮುಗಿದ ಅನಂತರ ಗುರುತಿಸುವುದು ತೀರ ಅಪರೂಪ. ಅಂದು ಇಂದು ಕೂಡಾ ಅದೆಷ್ಟೊ ದೇವಾಲಯಗಳಲ್ಲಿ ಪ್ರತಿಮೆಗಳನ್ನು ರೂಪಿಸಿ ಕೊಟ್ಟವರು ಸಾಕಷ್ಟು ಕಲಾಪುರುಷರಿದ್ದಾರೆ. ನಾವು ಯಾರು ಕೂಡಾ ಆ ಕಲಾ ಪುರುಷರ ಹೆಸರನ್ನು ಕೂಡಾ ಕೇಳುವ ಸೌಜನ್ಯ ಕೂಡಾ ತೇೂರಿಸುವುದಿಲ್ಲ. ದೇವಾಲಯಗಳಲ್ಲಿ ಬಿಂಬ ಸ್ಥಾಪನೆಯ ಅನಂತರ ಕಲಾಗಾರರಿಗೆ ಶಾಲು ಹೊದಿಸಿ ಗುರುತಿಸುವುದೇ ಅತೀ ದೊಡ್ಡ ಸಂಮಾನವೆಂದು ಭಾವಿಸಿಕೊಂಡು ಬಂದಿದ್ದೇವೆ.


ಆದರೆ ಅಯೇೂಧ್ಯ ಶ್ರೀರಾಮಚಂದ್ರನ ಪೀಠಾರೇೂಹಣ ಸಂದರ್ಭದಲ್ಲಿ ಮಾತ್ರ ಇದೊಂದು ಪವಾಡಸದೃಶವೊ ಎಂಬಂತೆ ಶ್ರೀ ಬಾಲರಾಮನಿಗೆ ಕೃಷ್ಣ ಶಿಲೆಯಲ್ಲಿ ದೇವತಾ ತೇಜಸ್ಸು ತುಂಬಿದ ಯೇೂಗಿರಾಜ್ ನಿಜಕ್ಕೂ ಶ್ರೀರಾಮಚಂದ್ರ ದಿವ್ಯ ಮೂರ್ತಿಯನ್ನು ತಮ್ಮ ಹೃದಯದಲ್ಲಿ ತುಂಬಿಸಿಕೊಂಡಿದ್ದರಿಂದಲೇ ಅವರ ಪರಿಶ್ರಮ ಸಾರ್ಥಕವಾಯಿತು ಅನ್ನುವ ಸತ್ಯ ಅವರ ಮಾತಿನಲ್ಲಿಯೇ ಸ್ಪುಟವಾಗಿ ಮೂಡಿ ಬಂದಿದೆ. ಟಿ.ವಿ.ವಾಹಿನಿ ಸಂದರ್ಶಕಿಯೊಬ್ಬರು ಕೊನೆಯಲ್ಲಿ ಅರುಣ ಯೇೂಗಿರಾಜಜ್‌ರಲ್ಲಿ ವಿನಂತಿಸಿ ಕೊಂಡ ಮಾತೆಂದರೆ "ಒಮ್ಮೆ ನಿಮ್ಮ ಕೈಯನ್ನು ನಾನು ಸ್ಪರ್ಶಿಸ ಬಹುದೇ? ಇದರ ಅರ್ಥ ಅಯೇೂಧ್ಯೆಯ ಭವ್ಯ ದಿವ್ಯ ನವ್ಯ ಮಂದಿರದಲ್ಲಿ ವಿರಾಜಮಾನರಾಗಿರುವ ಶ್ರೀರಾಮಚಂದ್ರನನ್ನು ಮುಟ್ಟಲು ಇನ್ನು ಸಾಧ್ಯವಿಲ್ಲ. ಆದರೆ ಆ ಮೂರ್ತಿಯನ್ನು ಸೃಷ್ಟಿಸಿ ರೂಪ ಕೊಡುವಾಗ ಕೈಯಲ್ಲಿ ಎತ್ತಿ ಮುದ್ದಾಡಿದ ನಿಮ್ಮ ಕರವನ್ನಾದರೂ ಮುಟ್ಟುವ ಸೌಭಾಗ್ಯ ನನ್ನದಾಗಲಿ ಅನ್ನುವ ನಿರೂಪಕಿಯ ಮಾತು ನಿಜಕ್ಕೂ ರೇೂಮಾಂಚನ ಭರಿತವಾಗಿತ್ತು. ಇದನ್ನೇ ಕರೆಯುವುದು ಕಲೆಯೊಳಗೆ ಶಿಲೆಯೊಳಗೆ ದೇವತಾ ಶಕ್ತಿ ಇದೆ ಅನ್ನುವುದು.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top