ಯಕ್ಷಗಾನಕ್ಕೆ ಮಾನ್ಯತೆ ಎಲ್ಲೆಡೆ ಇದೆ: ಅವಧೂತ ವಿನಯ್ ಗುರೂಜಿ

Upayuktha
0



ಮಂಗಳೂರು: ಇಂದು ಯಕ್ಷಗಾನದ ಸಂದೇಶಗಳ ಮೂಲಕ ಸಮಾಜ ಪರಿವರ್ತನೆ ಮಾಡಲು ಸಾಧ್ಯವಿದೆ. ಅಸತ್ಯದ ವಿರುದ್ಧ ಸತ್ಯಗೆಲ್ಲುತ್ತದೆ. ಧರ್ಮ ಸಾರಲ್ಪಡುತ್ತದೆ. ಆ ದೃಷ್ಟಿಯಲ್ಲೂ ಯಕ್ಷಗಾನ ಕಲೆ ಎಲ್ಲೆಡೆ ಮಾನ್ಯತೆ ಪಡೆದಿದೆ ಎಂದು ಅವಧೂತ  ವಿನಯ್ ಗುರೂಜಿ ಉರ್ವಾ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ  ಶಕುಂತಲಾ ಮತ್ತು ತಂಡದಿಂದ ನಡೆದ ಜಾಂಬವತಿ ಕಲ್ಯಾಣ ಪ್ರಸಂಗದ ಪ್ರದರ್ಶನವನ್ನು ವೀಕ್ಷಿಸಿ, ಮಾತನಾಡಿದರು.




ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ  ವಿಶ್ವಾಸ್ ಕುಮಾರ್ ದಾಸ್ ರವರು ಯಕ್ಷಗಾನ ಕಲೆಯದು ರಾಜಕಲೆ. ಅದಕ್ಕೆ ಕಲಾ ಸಂಘಟಕರು, ಕಲಾ ಪೋಷಕರು ನಿರಂತರ ಪ್ರೋತ್ಸಾಹ ನೀಡುತ್ತಾ ಬರಬೇಕು. ಆ ನಿಟ್ಟಿನಲ್ಲಿ ಶಕುಂತಳಾ ತಂಡಕ್ಕೆ ನಾವಿಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶಗಳಿವೆ. ಅದರಲ್ಲಿ ಇದೂ ಒಂದು. ಇನ್ನು ಮುಂದೆಯೂ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾವು ಪ್ರದರ್ಶನಾವಕಾಶ ಕೊಡುತ್ತೇವೆ ಎಂದರು.




ಮಂದಿರದ ಇನ್ನೋರ್ವ ವಿಶ್ವಸ್ಥೆ  ಲಾವಣ್ಯ ವಿಶ್ವಾಸ್ ದಾಸ್ ರವರು ಶುಭಕೋರಿದರು. ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪುರಸಭಾ ಸದಸ್ಯ  ದೀಪಕ್ ಪಿಲಾರ್, ಮೆಸ್ಕಾಂನ ಅಧಿಕಾರಿ  ನಿತೇಶ್, ಯುವ ಉದ್ಯಮಿ ರಕ್ಷಿತ್, ಮಧುಸೂದನ ಎ. ಲಕ್ಷೀನಾರಾಯಣ ಹೊಳ್ಳ, ಅಂಬಾತನಯ ಅರ್ನಾಡಿ, ನಾಗರಾಜ ಖಾರ್ವಿ ಭಾಗವಹಿಸಿದರು. ವಿಜಯಲಕ್ಷ್ಮೀ ನಿರೂಪಿಸಿದರು. ವೀಣಾ ಕೆ. ಉಜಿರೆ ಧನ್ಯವಾದವಿತ್ತರು. ಅದ್ವಿತ್ ಪ್ರಾರ್ಥಿಸಿ, ನಿಹಾಲ್ ಅತಿಥಿ - ಅಭ್ಯಾಗತರನ್ನು ಎದುರ್ಗೊಂಡರು. ಗುರೂಜಿಯವರ ಆಶೀರ್ವಚನದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ಸಾಯಿಬಾಬಾ ಮಂದಿರದ ವಿಶೇಷ ಸಹಕಾರದೊಂದಿಗೆ ಶಕುಂತಲಾ ತಂಡದಿಂದ ಬಯಲಾಟ ನಡೆಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top