ಮಂಗಳೂರು ಪುರಭವನದಲ್ಲಿ ಜನಮನ ಗೆದ್ದ 'ನೃತ್ಯಾಮೃತಂ-2024' ಸಮೂಹ ನೃತ್ಯ ಪ್ರದರ್ಶನ

Upayuktha
0

ಮಂಗಳೂರು: ಭರತಾಂಜಲಿ ರಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ ನೃತ್ಯಾಮೃತಂ- 2024 ಕಾರ್ಯಕ್ರಮವನ್ನು ನಗರದ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉದ್ಘಾಟಿಸಿದರು. ಕರ್ನಾಟಕದ ಕಲಾಶ್ರೀ ವಿದುಷಿ ಕಮಲ ಭಟ್ ಶುಭ ಹಾರೈಸಿದರು.



ಜಿಲ್ಲೆಯ ಐದು ಪ್ರತಿಷ್ಠಿತ ಸಂಸ್ಥೆಗಳಾದ ನಾಟ್ಯನಿಕೇತನ ಕೊಲ್ಯ, ಸನಾತನ ನಾಟ್ಯಾಲಯ ಬಲ್ಲಾಳ್ ಬಾಗ್, ಕಲಾ ನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ, ನೃತ್ಯ ಸುಧಾ (ರಿ) ಸಂಸ್ಥೆ, ನೃತ್ಯೋಪಸನಾ ಕಲಾ ಅಕಾಡೆಮಿ (ರಿ) ಪುತ್ತೂರು ಸಂಸ್ಥೆಗಳ ಕಲಾವಿದರಿಂದ ಸಮೂಹ ನೃತ್ಯ ಪ್ರದರ್ಶನ ಜರಗಿತು.  


ಪೊಳಲಿ ಗಿರೀಶ್ ತಂತ್ರಿ, ಚಂದ್ರಶೇಖರ ಮಯ್ಯ, ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಭರತಾಂಜಲಿಯ ನಿರ್ದೇಶಕರಾದ ವಿದ್ವಾನ್ ಶ್ರೀಧರ ಹೊಳ್ಳ ಪ್ರತಿಮಾ ಶ್ರೀಧರ್ ದಂಪತಿಗಳು, ವಿದುಷಿ ಚಂದ್ರಿಕಾ, ವಿದುಷಿ ಶ್ರೀಲತಾ ನಾಗರಾಜ್, ವಿದುಷಿ ವಿದ್ಯಾ ಮನೋಜ್, ವಿದುಷಿ ಶಾಲಿನಿ ಅತ್ಮಭೂಷಣ್, ವಿದುಷಿ ಸೌಮ್ಯ ಸುಧೀಂದ್ರ ರಾವ್ ಭರತಾಂಜಲಿಯ ವಿದುಷಿಯರಾದ ಪ್ರಕ್ಷಿಲಾ ಜೈನ್, ಮಾನಸ ಕುಲಾಲ್ ಉಪಸ್ಥಿರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top