ಉಜಿರೆ: ಬಾಲಕೃಷ್ಣ ಗೌಡ ಪುತ್ಯ ಇವರ ಸಾರಥ್ಯದಲ್ಲಿ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ.), ಪಂಜ ಆಡಿ ತೋರಿಸಿದ "ಲವ ಕುಶ " ಯಕ್ಷಗಾನ ಪ್ರಸಂಗ ಪ್ರದರ್ಶನ ವಿಶೇಷ ಆಕರ್ಷಣೆಗಳೊಂದಿಗೆ ವಿವಿದೆಡೆಗಳಿಂದ ಆಗಮಿಸಿದ ಸಹಸ್ರಾರು ಭಗವ್ಧಭಕ್ತರ ಕಣ್ಮನ ಸೆಳೆದಿದೆ. ಮಕ್ಕಳ ತಂಡ ತಮ್ಮ ಮುಗ್ದ ಹಾವ ಭಾವಗಳ ಮೂಲಕ ಪ್ರೇಕ್ಷಕರನ್ನು ತಮ್ಮತ್ತ ಸೆಳೆದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದಿಪೋತ್ಸವದಲ್ಲಿ ಆಕರ್ಷಕ ಮಳಿಗೆಗಳಿಂದ ಆವೃತವಾಗಿರುವ ರಾಜ್ಯಮಟ್ಟದ ವಸ್ತು ಪ್ರದರ್ಶನ ಮಂಟಪದಲ್ಲಿ ನಡೆದ ಮೊದಲ ದಿನದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಾಕರ್ಷಣೆಯಾದ ಕರಾವಳಿಯ ಗಂಡು ಕಲೆ ಯಕ್ಷಗಾನ.
ಪಂಜ ಪರಿಸರದಲ್ಲಿರುವ ಯಕ್ಷಗಾನ ಅಭಿರುಚಿ ಇರುವ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಕಲಾ ಸರಸ್ವತಿಯ ನಿಸ್ವಾರ್ಥ ಸೇವೆ ಮಾಡುತ್ತಾ ಬಂದಿರುವ ಸಂಸ್ಥೆ ಇದು.
ಪ್ರಸ್ತುತ "ಯಕ್ಷಮಣಿ " ಗಿರೀಶ್ ಗಡಿಕಲ್ಲು ಇವರು ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಹಿಮ್ಮೇಳದಲ್ಲಿ ಭಾಗವತರು - ಶಶಾಂಕ ಏಲಿಮಲೆ, ಕು| ರಚನಾ ಚಿದ್ಗಲ್ಲು, ಚೆಂಡೆಯಲ್ಲಿ ಲಕ್ಷೀಶ ಶಗ್ರೀತ್ತಾಯ ಪಂಜ, ಮದ್ದಳೆಯಲ್ಲಿ ವೆಂಕಟರಮಣ ಆಚಾರ್ಯ ಕಲ್ಮಡ್ಕ, ಚಕ್ರ ತಾಳ ಪ್ರೀತೇಶ್ ತಳೂರು. ಮುಮ್ಮೇಳದಲ್ಲಿ ಶತ್ರುಘ್ನನಾಗಿ ಗಗನ್ ಉತ್ರಂಬೆ, ದಮನನಾಗಿ ಅಂಶು ಮವಿನಕಟ್ಟೆ, ಪುಷ್ಕಳನಾಗಿ ಯಶ್ವಿತ್ ಕೇರ್ಪಡ, ಲವನಾಗಿ ಚೇತನ್ ಡೆಕ್ಕಳ, ವಟುಗಳಾಗಿ ತನುಷ್ ಕಡೋಡಿ, ತನ್ವಯಿ ಆಳ್ವ, ಗಗನ್ ಸಂಕ್ರಾAತಿ ಮೂಲೆ, ಮನ್ವಿತ್ ಬಾರ್ಯ , ಸೋಹನ್ ಪುತ್ಯ, ಸೀತೆಯಾಗಿ ಜ್ಞಾನಶ್ರೀ ಕೋಳ್ತುಗುಳಿ , ಕುಶನಾಗಿ ನಿನಾದ್ ದೇವರಮಜಲು, ರಾಮನಾಗಿ ಧೃತಿ ಕುಚ್ಚಾಲ, ಲಕ್ಷ್ಮಣನಾಗಿ ವಿನ್ಯಾಸ್ ಜಾಕೆ ಮತ್ತು ವಾಲ್ಮೀಕಿಯಾಗಿ ಕಾರ್ತಿಕ್ ನೆಕ್ಕಿಲ ತಮ್ಮ ಪಾತ್ರ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ