ಶ್ರೀ ಪೇಜಾವರ ಗುರುವಂದನ 2023: ಸಾರ್ವಜನಿಕ ಜನತೆಗೆ ವಿಧ್ಯುಕ್ತ ಆಹ್ವಾನ

Upayuktha
0

ಪತ್ರಿಕಾ ಗೋಷ್ಠಿಯ ಮೂಲಕ ಜನತೆಯನ್ನು ಆಹ್ವಾನಿಸಿದ ಗುರುವಂದನ‌ ಸಮಿತಿ 


ಉಡುಪಿ: ಡಿಸೆಂಬರ್‌ ‌16 ಶನಿವಾರ ಉಡುಪಿ ಶ್ರೀಕೃಷ್ಣ ಮಠ ಮತ್ತು ರಥಬೀದಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಕ್ಕೆ ಪರ್ಯಾಯ ಶ್ರೀ ಕೃಷ್ಣಾಪುರ ಶ್ರಿಗಳ ದಿವ್ಯ ನೇತೃತ್ವವಿರಲಿದೆ. ಪಲಿಮಾರು ಉಭಯ ಶ್ರೀಗಳು, ಕಾಣಿಯೂರು ಅದಮಾರು ಕಿರಿಯ, ಶೀರೂರು ಶ್ರೀಗಳ ದಿವ್ಯೋಪಸ್ಥಿತಿ ಇರುತ್ತದೆ ಎಂದು ಗುರುವಂದನ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್ ಸುವರ್ಣ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸ್ವಾಮೀಜಿ ನಮ್ಮ ಜಿಲ್ಲೆಯ ಹೆಮ್ಮೆ ಆದ್ದರಿಂದ ಎಲ್ಲರೂ ಕಾರ್ಯಕ್ರಮಕ್ಕೆ ಅವಶ್ಯ ಬನ್ನಿ ಎಂದು ಯಶ್‌ಪಾಲ್ ಸುವರ್ಣ ಸಾರ್ವಜನಿಕರಿಗೆ ಆಹ್ವಾನ ನೀಡಿದರು. 


ಸುವರ್ಣಾಭಿಷೇಕ ಸಹಿತ ವಿಶಿಷ್ಟ ರೀತಿಯಲ್ಲಿ ಅಭಿವಂದನೆ ನಡೆಯುತ್ತದೆ. ಬೆಳಿಗ್ಗೆ ಶ್ರೀ ಕೃಷ್ಣಮಠದಲ್ಲಿ ಶ್ರೀಕೃಷ್ಣಮಂತ್ರ ಯಾಗ, ಗೋಸೂಕ್ತ ಯಾಗ, ಮಧ್ಯಾಹ್ನ ರಾಜಾಂಗಣದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ, ಅಪರಾಹ್ನ 3.00ರಿಂದ ಜೋಡುಕಟ್ಟೆಯಿಂದ ಬೃಹತ್ ಶೋಭಾಯಾತ್ರೆ, ನೂರಾರು ಭಜನಾ ತಂಡಗಳ 2,000 ಮಂದಿ ಭಜಕರು, ಸಾಂಪ್ರದಾಯಿಕ ಬಿರುದಾವಳಿ ಚಂಡೆ ವಾದ್ಯ, ತಾಲೀಮು, ಬಣ್ಣದ ಕೊಡೆ, ಕೀಲು ಕುದುರೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಸಾಲಂಕೃತ ವಾಹನದಲ್ಲಿ ಉಡುಪಿಯ ರಾಜಬೀದಿಯಲ್ಲಿ ಶ್ರೀಗಳ ಪುರಮೆರವಣಿಗೆ ನಡೆಯಲಿದೆ.


ಸಂಜೆ 4.45ಕ್ಕೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಬೃಹತ್ ವೇದಿಕೆಯಲ್ಲಿ ಶ್ರೀಗಳ ಅಭಿವಂದನ ಸಮಾರಂಭ ನೆರವೇರಲಿದೆ.  ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಕೇಂದ್ರ, ರಾಜ್ಯದ ಸಚಿವರು, ಜನಪ್ರತಿನಿಧಿಗಳು, ಅನೇಕ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಜಿಲ್ಲೆಯ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರ ಸಹಯೋಗ ಈ ಕಾರ್ಯಕ್ರಮಕ್ಕೆ ಇರಲಿದೆ.


ಸಂಜೆ 7.30ಕ್ಕೆ ಸಭಾ ಕಾರ್ಯಕ್ರಮದ ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಯುವ ಗಾಯಕ ಮಹೇಶ್ ಕಾಳೆ ಮತ್ತು ಬಳಗ ಪುಣೆ ಇವರಿಂದ ಹಿಂದುಸ್ಥಾನಿ ಸಂಗೀತ ಮತ್ತು ಭಜನೆಗಳ ಕಾರ್ಯಕ್ರಮವಿದೆ. ಕಾರ್ಯಕ್ರಮದ ಅಂಗವಾಗಿ ಶ್ರೀಗಳವರ ರಾಮರಾಜ್ಯದ ಪರಿಕಲ್ಪನೆಯ ಅನೇಕ ಸಾಮಾಜಿಕ ಸೇವಾ ಕಾರ್ಯಗಳು ನಡೆಯಲಿವೆ.


ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷರುಗಳಾದ, ಪ್ರಸಿದ್ಧ ಸಿವಿಲ್ ಇಂಜಿನಿಯರ್, ಕಾಪು ಮಾರಿಗುಡಿಯ ಜೀರ್ಣೋದ್ಧಾರ ಸಮಿತಿ ಮುಖ್ಯಸ್ಥರಲ್ಲಿ ಒಬ್ಬರಾದ ಕಾಪು ವಾಸುದೇವ ಶೆಟ್ಟಿ, ಸಂಗೀತ ಸಭಾ ಉಡುಪಿ ಇದರ ಅಧ್ವರ್ಯು ಟಿ ರಂಗ ಪೈ ಮಣಿಪಾಲ, ವಿದ್ಯೋದಯ ಟ್ರಸ್ಟ್ ಉಡುಪಿ ಇದರ ಕಾರ್ಯದರ್ಶಿ ಕೆ ಗಣೇಶ್ ರಾವ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಪಿ ವಿಷ್ಣುಮೂರ್ತಿ ಆಚಾರ್ಯ, ಮಲ್ಪೆ  ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಯಕ್ಷಗಾನ‌ ಕಲಾರಂಗದ ಉಪಾಧ್ಯಕ್ಷ ಎಸ್ ವಿ ಭಟ್, ಪ್ರಧಾನ ಕಾರ್ಯದರ್ಶಿ ಜಿ ವಾಸುದೇವ ಭಟ್ ಪೆರಂಪಳ್ಳಿ, ಸಂಘಟನಾ ಕಾರ್ಯದರ್ಶಿ ಚಂದ್ರೇಶ್ ಪಿತ್ರೋಡಿ, ಸದಸ್ಯರುಗಳಾದ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾರಿಗೆ ಉದ್ಯಮಿ ರಾಘವೇಂದ್ರ ಭಟ್, ಸತೀಶ್ ಕುಮಾರ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top