ತೆಂಕನಿಡಿಯೂರು ಕಾಲೇಜು : ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನ ಆಚರಣೆ

Upayuktha
0



ತೆಂಕನಿಡಿಯೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ವಿಶ್ವಮಾನವತಾವಾದಿ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಸುರೇಶ್‍ರೈ ಕೆ ವೈಜ್ಞಾನಿಕ ಮತ್ತು ವಿಶಾಲ ಬದುಕಿನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ ರಾಷ್ಟ್ರಕವಿ ಕುವೆಂಪುರವರ ಮಾನವತಾವಾದಿ ಚಿಂತನೆಗಳು ಸಾರ್ವಕಾಲಿಕ ಮತ್ತು ನಮಗೆಲ್ಲಾ ಆದರ್ಶವೆಂದರು. ಕನ್ನಡ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ನೈನಾ ಶೆಟ್ಟಿ, ಸಂಗೀತಾ, ವಿಠಲ್, ಹಾಗೂ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ರಾಘವೇಂದ್ರ ಜಿ. ಗಾಣಿಗ ಕುವೆಂಪುರವರ ಪ್ರಸಿದ್ದ ಕವಿತೆಗಳನ್ನು ವಾಚಿಸಿದರು.  




ಇದೇ ಸಂದರ್ಭದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶಾಲಿನಿ ಯು.ಬಿ., ಶ್ರೀಮತಿ ಶರಿತಾ, ಶ್ರೀಮತಿ ಅರ್ಚನಾ ಹಾಗೂ ಇತಿಹಾಸ ವಿಭಾಗದ ಡಾ. ಮಹೇಶ್ ಕುಮಾರ್ ಕೆ.ಈ. ಹಾಗೂ ಡಾ. ಮೋಹನ್ ಉಪಸ್ಥಿತರಿದ್ದರು. ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಕಾರ್ಯಕ್ರಮ ಸಂಘಟಿಸಿದರು.  ಗ್ರಂಥಾಯದಲ್ಲಿ ಕುವೆಂಪುರವರ ಸಮಗ್ರ ಕೃತಿ ಪ್ರದರ್ಶಿಸಲಾಯಿತು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top