ಬರಹದ ಮೂಲಕ ವೈಚಾರಿಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ

Upayuktha
0



ಮಂಗಳೂರು: ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕವೇ ಹೆಸರುವಾಸಿಯಾದವರು. ಸಮಾಜದ ಅನ್ಯಾಯಗಳನ್ನು ತಮ್ಮ ಬರಹಗಳ ಮೂಲಕ ಟೀಕಿಸಿ ವೈಚಾರಿಕ ಕ್ರಾಂತಿ ಉಂಟು ಮಾಡಿದರು. ವಿಶ್ವಮಾನವ ತತ್ತ್ವ ಸಂದೇಶವನ್ನು ಜಗತ್ತಿಗೆ ನೀಡಿದರು. ಕುವೆಂಪು ಅವರ ಸರಳ ಜೀವನವನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಭಿಪ್ರಾಯಪಟ್ಟರು.




ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗ್ರಂಥಾಲಯ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ, ನಡೆದ "ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ - ವಿಶ್ವ ಮಾನವ ದಿನಾಚರಣೆ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.




ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಪ್ರೊ. ರಾಮಕೃಷ್ಣ ಬಿ. ಎಂ., ಕುವೆಂಪು ಅವರ ಜೀವನ ದೃಷ್ಟಿ, ವಿಚಾರಶೀಲತೆ ಯುವಜನತೆಗೆ ಎಂದಿಗೂ ಆದರ್ಶವಾಗಿರುತ್ತದೆ ಎಂದರು. ಕುವೆಂಪು ಬರೆದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿ ಶಿವಪ್ರಸಾದ್ ಪಾಂಚಜನ್ಯ ಕವನ ಸಂಕಲನವನ್ನು ವಿಮರ್ಶೆ ಮಾಡಿದರು ಮತ್ತು ಸಂದೀಪ್ ಸಮಯ್ ಕೌಟಿಲ್ಯನ ಅರ್ಥಶಾಸ್ತ್ರ ಪುಸ್ತಕ ವಿಮರ್ಶೆ ಮಾಡಿದರು. ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಡಾ. ನಾಗರತ್ನ ರಾವ್, ಡಾ. ಮೀನಾಕ್ಷಿ ಎಂ. ಎಂ., ಪ್ರೊ.. ಅಬೂಬಕ್ಕರ್ ಸಿದ್ಧಿಕ್, ಪ್ರೊ.. ಗಣಪತಿ ಗೌಡ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top