ಉತ್ತಮ ವ್ಯಕ್ತಿ ನಿರ್ಮಾಣಕ್ಕೆ ಶಿಕ್ಷಕರೇ ಅಡಿಪಾಯ: ಡಾ.ಶ್ರೀಪತಿ ಕಲ್ಲೂರಾಯ

Upayuktha
0



ಪುತ್ತೂರು: ವ್ಯಕ್ತಿಯೊಬ್ಬನ ನಡತೆ ನುಡಿ, ಆಚಾರ-ವಿಚಾರಗಳ ಮೂಲವೇ ಶಿಕ್ಷಣ. ಶಿಕ್ಷಣದಿಂದಲೇ ಆತನ ಒಳಿತು ಕೆಡುಕುಗಳ ನಿರ್ಧಾರವಾಗುತ್ತದೆ. ಇದನ್ನು ತಿಳಿಸುವರು ಶಿಕ್ಷಕರಾಗಿರುತ್ತಾರೆ. ಉತ್ತಮ ಶಿಕ್ಷಕನಾಗಲು ಬರವಣಿಗೆ ಕೌಶಲ್ಯ, ಉತ್ತಮ ಆಲಿಸುವಿಕೆ, ಒಳ್ಳೆಯ ಸಂವಹನ, ಶಿಕ್ಷಣದಲ್ಲಿ ಅಪಾರ ಪ್ರೀತಿ ಹಾಗೂ ಪ್ರತಿಯೊಬ್ಬರನ್ನು ಗೌರವಿಸುವ ಗುಣವಿರಬೇಕು. ವಿದ್ಯಾರ್ಥಿಗಳು ಕಷ್ಟಕ್ಕೆ ಸ್ಪಂದಿಸಿ ಆತನಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ತಿಳಿಸಿದರು.




ಇವರು ಪುತ್ತೂರು ವಿವೇಕಾನಂದ ಕಲಾ ವಿಜ್ಞಾನ ವಾಣಿಜ್ಯ (ಸ್ವಾಯತ್ತ)ಮಹಾವಿದ್ಯಾಲಯ  ಇಲ್ಲಿನ ಐಕ್ಯೂಎಸಿ ಘಟಕದಿಂದ ಆಯೋಜಿಸಿದ ಹೊಸತಾಗಿ ನೇಮಕರಾದ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಆಯೋಜಿಸಿ ಮಾತನಾಡಿದರು. 




ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ, ವಿವೇಕಾನಂದ ಸಂಸ್ಥೆಯು ದೇಶವನ್ನು ಕಟ್ಟುವ ಕೆಲಸವನ್ನು ಮಾಡುತ್ತದೆ. ಈ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಾಡುತ್ತಾರೆ ಎಂದು ಸಂಸ್ಥೆಯ ಇತಿಹಾಸದ ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ನೀಡಿದರು.




ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.. ವಿಷ್ಣು ಗಣಪತಿ ಭಟ್, ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಎಚ್. ಜಿ ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ..ಶಿವಪ್ರಸಾದ್.ಎಸ್ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top