ಮಂಗಳೂರು ವಿವಿ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವು ಡಿಸೆಂಬರ್ 4,5, 6 ರಂದು ಉಡುಪಿ ಜಿಲ್ಲೆಯ ತೆಂಕನಿಡಿಯೂರು ಜಿ.ಎಫ್ .ಜಿ.ಸಿ ಕಾಲೇಜಿನಲ್ಲಿ ನಡೆಯಿತು.
ಇದರಲ್ಲಿ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಸ್ಥಾನವನ್ನು ಗಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳಾದ ದ್ವಿತೀಯ ಬಿಕಾಂ ವಿಭಾಗದ ವೈಭವ್, ಡೆಕಾಥ್ಲಾನ್‍ನಲ್ಲಿ ಬೆಳ್ಳಿ ಪದಕ, ಕೌಶಿಕ್ ಶಾಟ್‍ಪುಟ್‍ನಲ್ಲಿ ಕಂಚಿನ ಪದಕ, ಗುರುಪ್ರಸಾದ್ 800 ಮೀಟರ್ ಓಟದಲ್ಲಿ 4 ನೇ ಸ್ಥಾನ 1500 ಮೀಟರ್ ಓಟದಲ್ಲಿ 5 ನೇ ಸ್ಥಾನ, 4x400 ರಲ್ಲಿ 4 ನೇ ಸ್ಥಾನ.ಭರತ್ 4x400 ಮೀಟರ್ಸ್ ನಲ್ಲಿ 4 ನೇ ಸ್ಥಾನ , 800 ಮೀಟರ್ಸ್ ನಲ್ಲಿ 5 ನೇ ಸ್ಥಾನ, ಪವನ್ 4x100 ಮೀಟರ್ಸ್ ನಲ್ಲಿ 4ನೇ ಸ್ಥಾನ, ಸಾತ್ವಿಕ್ 4x100 mಣs ನಲ್ಲಿ 4ನೇ ಸ್ಥಾನ, ಪ್ರೇಕ್ಷಿತಾ, ಹ್ಯಾಮರ್ ಥ್ರೋನಲ್ಲಿ 6ನೇ, ಶಾಟ್‍ಪುಟ್‍ನಲ್ಲಿ 7ನೇ ಸ್ಥಾನ . ತೃತೀಯ, ಬಿಸಿಎ ವಿಭಾಗದ ವಿದ್ಯಾರ್ಥಿಗಳಾದ ಋತ್ವಿಕ್ 110 ಮೀಟರ್ಸ್ ಹರ್ಡಲ್ಸ್‍ನಲ್ಲಿ 4 ನೇ ಸ್ಥಾನ 4x100 ಮೀಟರ್ಸ್ ನಲ್ಲಿ 4 ನೇ ಸ್ಥಾನ,4x400 ಮೀಟರ್ಸ್ ನಲ್ಲಿ 4 ನೇ ಸ್ಥಾನ ದ್ವಿತೀಯ ಬಿಬಿಎ ವಿಭಾಗದ ಅನೀಶ್ 4x400 ಮೀಟರ್ಸ್ ನಲ್ಲಿ 4 ನೇ ಸ್ಥಾನ, ಪ್ರಥಮ ಬಿಕಾಂ ವಿಭಾಗದ ರಜತ್ 4x100 ಮೀಟರ್ಸ್ ನಲ್ಲಿ 4 ನೇ, 100 ಮೀಟರ್ಸ್ ನಲ್ಲಿ 6 ನೇ. ಸ್ಥಾನ, ದ್ವಿತೀಯ ಬಿಸಿಎ ವಿಭಾಗದ ರಕ್ಷಾ ಡಿಸ್ಕಸ್ ಥ್ರೋನಲ್ಲಿ 5 ನೇ ಸ್ಥಾನ ಗಳಿಸಿರುತ್ತಾರೆ.
ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ 1 ಬೆಳ್ಳಿ, 1 ಕಂಚು, 4, ನಾಲ್ಕನೇ ಸ್ಥಾನ ಮತ್ತು 2 ಐದನೇ ಸ್ಥಾನದೊಂದಿಗೆ ಮೂರನೇ ಸ್ಥಾನದಲ್ಲಿ ಟೀಮ್ ಚಾಂಪಿಯನ್ಶಿಪ್ ಗಳಾಗಿ ಹೊರಹೊಮ್ಮಿದರು. ವಿಜೇತ ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಯತೀಶ್ ಕುಮಾರ್ ಹಾಗೂ ಡಾ.ಜ್ಯೋತಿ ತರಬೇತಿ ನೀಡಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ