ಡಿ.3ರಿಂದ 9ರ ವರೆಗೆ ಕದ್ರಿಯಲ್ಲಿ ತಾಳಮದ್ದಲೆ ಸಪ್ತಾಹ

Upayuktha
0


ಮಂಗಳೂರು: ಕುರಿಯವಿಠಲಶಾಸ್ತ್ರಿ  ಪ್ರತಿಷ್ಠಾನ(ರಿ) ಉಜಿರೆ ವತಿಯಿಂದ ರಜತಪರ್ವ ಸರಣಿ ಸಪ್ತಾಹ ತಾಳಮದ್ದಲೆ ಡಿ.3ರಿಂದ 9ರ ವರೆಗೆ ಕದ್ರಿ ದೇವಸ್ಥಾನ ಪ್ರಾಂಗಣದ ಮಾತಾಕೃಪ ಮಂಟಪದಲ್ಲಿ ನಡೆಯಲಿದೆ.



ಕದ್ರಿ ಯಕ್ಷಕೂಟದ ಸಹಯೋಗದೊಂದಿಗೆ ಪ್ರತಿದಿನ ಸಂಜೆ 4.45ರಿಂದ 7. 45 ಗಂಟೆವರೆಗೆ 7 ದಿನಗಳ ಕಾಲ ಕ್ರಮವಾಗಿ ಹನುಮಾರ್ಜುನ, ವಾಮನ ಚರಿತ್ರೆ, ಗುರು ದಕ್ಷಿಣೆ, ಶಲ್ಯ ಸಾರಥ್ಯ, ಮಾಗಧ ವಧೆ, ಸೀತಾಪಹಾರ, ಕೃಷ್ಣ ಪರಂಧಾಮ ಪ್ರಸಂಗ ನಡೆಯಲಿದೆ. 



ಮುಮ್ಮೇಳ ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರು ಭಾಗವಹಿಸುವರು. ಪ್ರತಿಷ್ಠಾನ ವತಿಯಿಂದ 146 ತಾಳಮದ್ದಳೆಗಳು ಸಂಪನ್ನಗೊಳ್ಳಲಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ರಜತಪರ್ವ ಸರಣಿಯ 150ನೇ ತಾಳಮದ್ದಳೆ ಯೊಂದಿಗೆ ಮಹಾ ಮಂಗಳ ಕುರಿಯದ ಮೂಲ ಮನೆಯಲ್ಲಿ ಸಂಪನ್ನಗೊಳ್ಳಲಿದೆ.


 

ರಜತ ಪರ್ವ ಸರಣಿಯ ಮಹಾ ಅವಲೋಕನ ಮತ್ತು ಸಮಾರೋಪ ಸಮಾರಂಭವನ್ನು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲಾಗುತ್ತದೆ. 




ಡಿಸೆಂಬರ್ ತಿಂಗಳಲ್ಲಿ ಕುರಿಯ ಪ್ರತಿಷ್ಠಾನದ ರಜತಪರ್ವ ಸರಣಿ ಕಾರ್ಯಕ್ರಮಗಳಿಗೆ ಪೂರ್ಣವಿರಾಮವಾದರೂ ಕೂಡ, ಪ್ರತಿಷ್ಠಾನದ ಚಟುವಟಿಕೆ ಯಕ್ಷಗಾನ, ತಾಳಮದ್ದಳೆ ಮತ್ತು ಇತರ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದು ಎಂದು ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ.




ಪ್ರತಿದಿನ ಕಾರ್ಯಕ್ರಮ ಭಕ್ತಿಶ್ರೀ ಟಿ.ವಿ ಚಾನಲ್ ಮೂಲಕ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top