ಟಿಸಿಎಸ್ ಗ್ರಾಮೀಣ ಐಟಿ ಕ್ವಿಜ್: ಭಿಲಾಯ್ ಶಾಲೆಗೆ ಪ್ರಶಸ್ತಿ

Upayuktha
0



ಮಂಗಳೂರು: ಬೆಂಗಳೂರು ಟೆಕ್ ಶೃಂಗಸಭೆಯ ಭಾಗವಾಗಿ ಇತ್ತೀಚೆಗೆ ನಡೆದ ಟಿಸಿಎಸ್ ಗ್ರಾಮೀಣ ಐಟಿ ಕ್ವಿಜ್‍ನ 24ನೇ ಆವೃತ್ತಿಯ ರಾಷ್ಟ್ರೀಯ ಫೈನಲ್‍ನಲ್ಲಿ ಛತ್ತೀಸ್‍ಗಢದ ಭಿಲಾಯಿ ಬಿಎಸ್‍ಪಿ ಹಿರಿಯ ಮಾಧ್ಯಮಿಕ ಶಾಲೆಯ ಉದಿತ್ ಪ್ರತಾಪ್ ಸಿಂಗ್ ಪ್ರಶಸ್ತಿ ಗೆದ್ದಿದ್ದಾರೆ.



ಗೋವಾದ ಬಿಚೋಲಿಮ್ ಡಾ.ಕೆ.ಬಿ.ಹೆಡಗೇವಾರ್ ವಿದ್ಯಾಮಂದಿರದ ವಿಘ್ನೇಶ್ ನೌಸೋಶೇಟ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತರು ಹಾಗೂ ರನ್ನರ್ ಅಪ್ ಕ್ರಮವಾಗಿ 1 ಲಕ್ಷ ಮತ್ತು 50 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ಗೆದ್ದಿದ್ದಾರೆ.



ಎಂಟರಿಂದ ಹನ್ನೆರಡನೇ ತರಗತಿವರೆಗಿನ ಮಕ್ಕಳಿಗೆ ಹಮ್ಮಿಕೊಂಡ ಈ ವರ್ಷದ ಸ್ಪರ್ಧೆಯಲ್ಲಿ ಆನ್‍ಲೈನ್ ಪರೀಕ್ಷೆಗಳು, ವರ್ಚುವಲ್ ಮತ್ತು ಭೌತಿಕ ರಸಪ್ರಶ್ನೆ ನಡೆಯಿತು. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಟಿಸಿಎಸ್ ಪ್ರಾದೇಶಿಕ ಮುಖ್ಯಸ್ಥ ಸುನೀಲ್ ದೇಶಪಾಂಡೆ ಪ್ರಶಸ್ತಿ ಪ್ರದಾನ ಮಾಡಿದರು.



ಕರ್ನಾಟಕದಿಂದ ಗೋಕಾಕ್‍ನ ಫೋಬ್ರ್ಸ್ ಅಕಾಡೆಮಿಯ ಅಮೃತ್ ಉಪ್ಪಾರ್, ಮಧ್ಯಪ್ರದೇಶದ ಹರ್ಷಿತ್ ರಾಯಕ್‍ವಾಡ್, ರಾಜಸ್ಥಾನದ ಗರ್ವಿತ್ ಸ್ವಾಮಿ, ಉತ್ತರ ಪ್ರದೇಶದ ದಿವ್ಯಾ ಮಿಶ್ರಾ, ಮಹಾರಾಷ್ಟ್ರ್ದ ಶಿವಂ ಠಾಕ್ರೆ ಮತ್ತು ಗುಜರಾತ್‍ಮ ಪಂಥ್ ಮಾಲವ್ ಭಾಯಿ ಪಟೇಲ್ ಫೈನಲ್ ತಲುಪಿದ್ದ ಇತರ ಸ್ಪರ್ಧಿಗಳು ಎಂದು ಪ್ರಕಟಣೆ ಹೇಳಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top