ಬಿಜಿಎಸ್‌ ಗ್ಲೆನಿಗಲ್ಸ್‌ ಆಸ್ಪತ್ರೆಗೆ ಗೋಲ್ಡ್ ಸ್ಟ್ಯಾಂಡರ್ಡ್ ಪ್ರಶಸ್ತಿ

Upayuktha
0

ಮಂಗಳೂರು: ಪ್ರತಿಷ್ಠಿತ ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ 800 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ಪರಮೋಚ್ಚ ವೈದ್ಯಕೀಯ ಶ್ರೇಷ್ಠತೆಗೆ ನೀಡುವ ಗೋಲ್ಡ್ ಸ್ಟ್ಯಾಂಡರ್ಡ್ ಪ್ರಶಸ್ತಿಗೆ ಪಾತ್ರವಾಗಿದೆ.




ಮೂತ್ರಪಿಂಡ ತಜ್ಞ ಡಾ. ಅನಿಲ್ ಕುಮಾರ್ ಬಿ.ಟಿ. ಮತ್ತು ಮೂತ್ರಶಾಸ್ತ್ರಜ್ಞ ಡಾ. ನರೇಂದ್ರ ಎಸ್.  ಅವರ ದೂರದೃಷ್ಟಿಯ ನಾಯಕತ್ವದಡಿ ಅತ್ಯಾಧುನಿಕ ಚಿಕಿತ್ಸೆ ಜೊತೆಗೆ ಮೂತ್ರಪಿಂಡ ಕಸಿ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಲಭ್ಯವಿರುವ ಸುಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಗೌರವಕ್ಕೆ ಪಾತ್ರವಾಗಿದೆ ಎಂದು ಸಿಒಒ ಬಿಜು ನಾಯರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.




ರೋಗಿ ಕೇಂದ್ರಿತ ವಿಧಾನ, ವೈದ್ಯಕೀಯ ನಾವೀನ್ಯತೆ, ಆಸ್ಪತ್ರೆಯ ಪರಿಣಿತಿ, ಪಾರದರ್ಶಕತೆ ಮತ್ತು ನಂಬಿಕೆಯಿಂದ ಇದು ಸಾಧ್ಯವಾಗಿದೆ. ಚಿಕಿತ್ಸೆಯಲ್ಲಿ ಸಾಧಿಸಿದ ಅಸಾಧಾರಣ ಕ್ರಮಗಳು ಉತ್ತಮ ಫಲಿತಾಂಶಕ್ಕೆ ಕಾರಣ. ನಮ್ಮ ತಂಡದ ಸಮರ್ಪಣೆ, ಪಾರದರ್ಶಕ ಸಂವಹನ, ರೋಗಿಕೇಂದ್ರಿತ ವಿಧಾನದಿಂದ ಈ ವಿಶ್ವಾಸ ಗಳಿಸಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top