ಲಲಿತಾ ಭಜನಾ ಮಂಡಳಿಯಿಂದ ಶ್ರೀ ಭಗವದ್ಗೀತಾ ಅಭಿಯಾನ

Upayuktha
0


ಪಣಜಿ: ನಮ್ಮ ಧರ್ಮಗ್ರಂಥ ಹಾಗೂ ವಿಶ್ವದ ಧರ್ಮಗ್ರಂಥವಾಗಬಲ್ಲ ಅರ್ಹತೆಯನ್ನು ಪಡೆದಿರುವ ಶ್ರೀ ಭಗವದ್ಗೀತೆ, ಐನ್‌ಸ್ಟೈನ್‌ನಂತಹ ವಿಜ್ಞಾನಿಗಳು ತಮ್ಮ ಎಲ್ಲ ಸಂಶೋಧನೆಗಳಿಗೂ ಮೂಲ ಭಗವಧ್ಗೀತೆ ಎಂದು ಹೇಳಿದ್ದರು. ನನ್ನ ಸಂಶೋಧನೆಗೆ ಮೂಲ ಪ್ರೇರಣೆ ಭಗವದ್ಗೀತೆ ಎಂದು ಹೇಳಿದ್ದರು. ಇಂತಹ ಭಗವದ್ಗೀತೆಯನ್ನು ಗೋವಾದಲ್ಲಿರುವ ನಮ್ಮ ಹವ್ಯಕ ಸಮಾಜ ಅಭಿಯಾನದ ಮೂಲಕ ಕಲಿಸುತ್ತಿರುವುದು ಸಂತಸದ ಸಂಗತಿ ಎಂದು ಉಪನ್ಯಾಸಕರಾದ ಮಹಾಬಲ ಭಟ್ ನುಡಿದರು.



ಶ್ರೀ ಲಲಿತಾ ಭಜನಾ ಮಂಡಳಿ ಗೋವಾ ಮಹಿಳೆಯರಿಂದ ಗೋವಾದ ಪಣಜಿ ಸಮೀಪದ ತಾಲಿಗಾಂವನ ಶ್ರೀ ಸಾತೇರಿ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿದ್ದ "ಶ್ರೀ ಭಗವದ್ಗೀತಾ ಅಭಿಯಾನ" ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.



ಗೌರವಾರ್ಪಣೆ ಸ್ವೀಕರಿಸಿದ ಹಿರಿಯ ಪುರೋಹಿತರಾದ ಕೃಷ್ಣ ಭಟ್ ಮಾತನಾಡಿ- ಶ್ರೀ ಲಲಿತಾ ಭಜನಾ ಮಂಡಳಿ ಗೋವಾದಲ್ಲಿ ಭಗವಧ್ಗೀತೆ ಹಾಗೂ ವಿವಿಧ ಸ್ತೋತ್ರ ಮತ್ತು ಭಜನೆಯನ್ನು ಆನ್‌ಲೈನ್ ಮೂಲಕ ಕಲಿಸಿ ಧಾರ್ಮಿಕತೆಯನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿಯೂ ಕೂಡ ಈ ಭಜನಾ ಮಂಡಳಿ ಇನ್ನೂ ಭಗಮಂತನ ಸೇವಾ ಕಾರ್ಯಗಳನ್ನು ಈ ಮೂಲಕ ಮುಂದುವರೆಸಿಕೊಂಡು ಹೋಗುವಂತಾಗಲಿ ಎಂದರು.



ಗೋವಾದಲ್ಲಿ ಕಳೆದ ಸುಮಾರು 3 ದಶಕಗಳಿಂದ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿರುವ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕೃಷ್ಣ ಭಟ್ ಹಾಗೂ ಗೋದಾವರಿ ಭಟ್ ದಂಪತಿಗಳನ್ನು ಶ್ರೀ ಲಲಿತಾ ಭಜನಾ ಮಂಡಳಿ ವತಿಯಿಂದ ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಶ್ರೀ ಭಗವದ್ಗೀತೆ, ಶಂಕರ ಸ್ತೋತ್ರ, ಅಚ್ಯುತಾಷ್ಠಕ, ಕಾಲಭೈರವಾಷ್ಠಕ, ಮೀನಾಕ್ಷಿ ಸ್ತೋತ್ರ ಪಠನೆ ಮಾಡಲಾಯಿತು. ರಾಜೇಶ್ವರಿ ಭಟ್ ಮತ್ತು ವಾಣಿಶ್ರೀ ಭಟ್ ರವರು ಕಾರ್ಯಕ್ರಮ ನಡೆಸಿಕೊಟ್ಟರು. ಪುರೋಹಿತರಾದ ರಾಮಚಂದ್ರ ಭಟ್ ಹಾಗೂ ವಾಣಿಶ್ರೀ ಭಟ್ ಈ ಕಾರ್ಯಕ್ರಮ ಆಯೋಜಿಸಿದ್ದರು. ಶ್ರೀ ಲಲಿತಾ ಭಜನಾ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top