ಪುತ್ತೂರು: ಕರ್ನಾಟಕ ರಾಜ್ಯ ವೇಟ್ ಲಿಫ್ಟರ್ಸ್ ಅಸೋಸಿಯೇಷನ್ ಇದರ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ 17ರಿಂದ 20ರವರೆಗೆ ನಡೆಸಿದ 34ನೇ ರಾಜ್ಯಮಟ್ಟದ ಜೂನಿಯರ್ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ +87 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸಿದ ಕುಮಾರಿ ರಕ್ಷಾ. ಜಿ ದ್ವಿತೀಯ ಬಿ ಸಿ ಎ (ಡಿ) ಇವರು ಬೆಳ್ಳಿಯ ಪದಕವನ್ನು ಗಳಿಸಿರುತ್ತಾರೆ. ಇವರು ಮಾಣಿಯ ಡೀಕಯ್ಯ ಪೂಜಾರಿ ಮತ್ತು ಎನ್. ಲಲಿತ ದಂಪತಿಯ ಪುತ್ರಿ.
71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ದ್ವಿತೀಯ ಬಿಕಾಂ (ಎ) ತರಗತಿಯ ಕುಮಾರಿ ಪ್ರೇಕ್ಷಿತ ಶೆಟ್ಟಿ ಇವರು ಕಂಚಿನ ಪದಕವನ್ನು ಗಳಿಸಿರುತ್ತಾರೆ. ಇವರು ವಿಟ್ಲ ಕೊಡಂಗಾಯಿಯ ಪ್ರಭಾಕರ ಶೆಟ್ಟಿ ಮತ್ತು ಶೋಭಲತಾ ವಿ ಶೆಟ್ಟಿ ಇವರ ಪುತ್ರಿ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಹಾಗೂ ಯತೀಶ್ ಕುಮಾರ್ ಹಾಗೂ ಡಾ. ಜ್ಯೋತಿ ಇವರು ತರಬೇತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮತ್ತು ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ