ರವಿರಾಜ ಪನೆಯಾಲಗೆ "ಶ್ರೀ ಕದ್ರಿ" ಪ್ರಶಸ್ತಿ ಪ್ರದಾನ

Upayuktha
0

ಮಂಗಳೂರು: ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಪ್ರಾಂಗಣದಲ್ಲಿ ನಡೆದ ಯಕ್ಷಗಾನ ಬಯಲಾಟ ಸಂದರ್ಭ ವೇಷಧಾರಿ ರವಿರಾಜ ಪನೆಯಾಲ ಅವರಿಗೆ ಶ್ರೀ ಕದ್ರಿ" ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿ, ಪನೆಯಾಲರು ಕೀಚಕ, ಭೀಮ, ಸುಂದೋಪ ಸುಂದ ಮೊದಲಾದ ಪಾತ್ರಗಳಿಗೆ ಜೀವ ತುಂಬಿದವರು. ಸಮರ್ಥ ಅರ್ಥಧಾರಿ, ಕೃಷಿಕನಾಗಿ ಮತ್ತು ಯಕ್ಷಗಾನದಲ್ಲೂ ಕೃಷಿ ಮಾಡುತ್ತಿರುವ ಪನೆಯಾಲರು ಯುವ ಕಲಾವಿದರಿಗೆ ಆದರ್ಶ ಯಕ್ಷಗಾನ ಬಯಲಾಟ ತುಳುನಾಡಿನ ಜೀವನಾಡಿ, ಸಾವಿರಕ್ಕೂ ಮಿಕ್ಕಿ ವೃತ್ತಿಪರ ಕಲಾವಿದರು, ಹತ್ತುಸಾವಿರಕ್ಕೂ ಮಿಕ್ಕಿ ಹವ್ಯಾಸಿಗಳು ಇರುವ ಕ್ಷೇತ್ರಕ್ಕೆ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕಲಿಯಲು ಬರುತ್ತಿರುವುದು ಕಲೆಯ ವಿಶೇಷ ಶಕ್ತಿ ಎಂದರು.


ಪ್ರಶಸ್ತಿ ಸ್ವೀಕರಿಸಿದ ರವಿರಾಜ‌ ಪನೆಯಾಲ ಮಾತನಾಡಿ, ಯಕ್ಷವೇಷ ಧರಿಸಿದ ನನಗೆ ಸನ್ಮಾನ ಮಾಡಿದ್ದೀರಿ.  ‌ರಂಗದಲ್ಲಿ ಮಾಡುವ ಪಾತ್ರಗಳಿಗೆ ಈ ಪ್ರಶಸ್ತಿ. ಇದು ಯಕ್ಷಗಾನ ಕಲೆಗೆ ಸಂದ ಗೌರವ ಎಂದರು.


ಕಾರ್ಪೊರೇಟರ್ ಮನೋಹರ ಶೆಟ್ಟಿ ಕದ್ರಿ, ಕಾರ್ಪೊರೇಟರ್ ಶಕಿಲಾ ಕಾವ, ಶಿವಳ್ಳಿ ಸ್ಪಂದನ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ಪೊಳಲಿ ಗಿರಿಪ್ರಕಾಶ್ ತಂತ್ರಿ, ಸುಧಾಕರ ರಾವ್ ಪೇಜಾವರ, ಆಯೋಜಕರಾದ  ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ದೀಪಾ. ಕೆ.ಎಸ್., ಋತ್ವಿಕ್ ಅಲೆವೂರಾಯ, ಸಂಹಿತಾ ಅಲೆವೂರಾಯ, ಸುಜಾತ ಕುಮಾರಿ, ರಾಘವೇಂದ್ರ ಭಟ್ ಇದ್ದರು.


ಯಕ್ಷಕೂಟ ಸಂಚಾಲಕ  ಕದ್ರಿ ರಾಮಚಂದ್ರ ಭಟ್ ಎಲ್ಲೂರು ನಿರೂಪಿಸಿ ವಂದಿಸಿದರು.


ಆಸ್ರಣ್ಣ ಭೇಟಿ:


ಕಟೀಲು ಕ್ಷೇತ್ರದ  ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಭೇಟಿ‌ ನೀಡಿ, ಚೌಕಿಯಲ್ಲಿ ದೇವರ ದರ್ಶನ ಪಡೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top