ಬಾಡಿಬಿಲ್ಡರ್‌ಗಳಿಗೆ ಕಮಿಟ್‌ಮೆಂಟ್ ಅಗತ್ಯ: ಡಾ.ವೈ. ಭರತ್ ಶೆಟ್ಟಿ
ಸುರತ್ಕಲ್: ಝೆನ್ ಜಿಮ್ ಸುರತ್ಕಲ್ ಹಾಗೂ ದ.ಕ. ಅಶೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಮಿ. ದಕ್ಷಿಣ ಕನ್ನಡ 2023 ದೇಹದಾರ್ಡ್ಯ ಸ್ಪರ್ಧೆಯನ್ನು ಶನಿವಾರ ಸಂಜೆ ಇಲ್ಲಿನ ಕರ್ನಾಟಕ ಸೇವಾ ವೃಂದ ಸಭಾಂಗಣದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು "ಬಾಡಿ ಬಿಲ್ಡರ್ಗಳಿಗೆ ನಿರ್ದಿಷ್ಟ ನಿಯಮಗಳು ಅಗತ್ಯವಾಗಿದೆ. ತೆಗೆದುಕೊಳ್ಳುವ ಆಹಾರ, ಸಪ್ಲಿಮೆಂಟ್ ಗಳಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ದೇಹದಾರ್ಡ್ಯ ಅನ್ನುವುದು ಸುಲಭದ ಮಾತಲ್ಲ. ಇನ್ನು ಇಂತಹ ಸ್ಪರ್ಧೆ ಆಯೋಜನೆ ಮಾಡುವುದು ಕೂಡ ಕಷ್ಟ. ಯಾಕೆಂದರೆ ದೇಶದಲ್ಲಿ ಕ್ರಿಕೆಟ್ ನಂತಹ ಕ್ರೀಡೆಗಳಿಗೆ ಇರುವಷ್ಟು ಪ್ರೋತ್ಸಾಹ ಇಂತಹ ಕ್ರೀಡೆಗಳಿಗಿಲ್ಲ. ಹೀಗಿದ್ದರೂ ಪುಂಡಲೀಕ ಹೊಸಬೆಟ್ಟು ಮತ್ತವರ ತಂಡ ಸಾಕಷ್ಟು ಶ್ರಮವಹಿಸಿ ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಸ್ಪರ್ಧೆ ನಿತ್ಯ ನಿರಂತರವಾಗಿ ನಡೆಯಲಿ" ಎಂದು ಶುಭ ಹಾರೈಸಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ. ಶಂಕರ್, ಸ್ಪರ್ಧಾ ಸಮಿತಿ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ