ಮಂಗಳೂರು: ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ರುದ್ರಮಂತ್ರ ಪಠಣ

Upayuktha
0


ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಧನುರ್ಮಾಸದ ಪುಣ್ಯದಿನವಾದ ಧನಿಷ್ಟಾ ಪಂಚಮಿಯ ಬ್ರಾಹ್ಮೀ ಮುಹೂರ್ತದಲ್ಲಿ, ಅಂದರೆ ಭಾನುವಾರ ದಿನಾಂಕ 17 ರಂದು ಶಾಸ್ತ್ರೋಕ್ತವಾದ ರುದ್ರಮಂತ್ರ ಪಠಣ ಜರುಗಿತು.


ಲೋಕ ಕಲ್ಯಾಣಾರ್ಥ ನಂತೂರಿನ ಶಂಕರಶ್ರೀಯ ರುದ್ರಪಠಣ ಸಮಿತಿಯು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ್ ಪೆರ್ಲ, ಜ್ಯೋತಿರ್ವಿದ್ವಾನ್ ಶ್ರೀ ಪ್ರವೀಣ್ ಚಂದ್ರ ಶರ್ಮ, ಶಂಕರಶ್ರೀ ಯ ರುದ್ರಪಠಣ ತಂಡದ ಸದಸ್ಯರಾದ ಬಿ. ಶ್ರೀಕೃಷ್ಣ ಭಟ್ ಪಯ, ಡಾ. ಎಸ್.ಎಂ. ಶರ್ಮಾ, ಡಾ. ರಾಜೇಂದ್ರಪ್ರಸಾದ್, ಚಂದ್ರಶೇಖರ ಕುಳಮರ್ವ, ಡಾ.ಈಶ್ವರ ‌ಭಟ್ ಪಲ್ಲಾದೆ, ನಾರಾಯಣ ಭಟ್ ಕಂಜರ್ಪಣೆ, ಸುಧನ್ವ ಕುಲಕರ್ಣಿ, ವಿಶ್ವಪತಿ ಮೊಳೆಯಾರ, ವಿಶ್ವೇಶ್ವರ ಮೊಳೆಯಾರ, ಆಗಮ ಪೆರ್ಲ, ಕೆ. ಶ್ರೀಧರ ರಾವ್, ಬಾಲಕೃಷ್ಣ ಭಟ್, ಆರ್. ಕೆ. ಮಿತ್ತೂರು ಮೊದಲಾದವರು ಭಾಗವಹಿಸಿ ರುದ್ರಮಂತ್ರ ಹಾಗೂ ವೇದಮಂತ್ರಗಳನ್ನು ಪಠಿಸಿದರು.



ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ರುದ್ರಮಂತ್ರದ ವಿಶೇಷತೆಗಳ ಬಗ್ಗೆ ತಿಳಿಸಿಕೊಟ್ಟರು.  ಸೇವಾಸಮಿತಿಯ ಉಪಾಧ್ಯಕ್ಷ ಸುರೇಶ್ ಅಮಿನ್, ನಿರಂಜನ ಅಡ್ಯಂತಾಯ, ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಅಕ್ಷತಾ ಶೆಣೈ, ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಡಾ. ದೇವದಾಸ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top