ಮಂಗಳೂರು: ಸಣ್ಣ ವ್ಯವಹಾರ ಬೆಳೆಸಲು ಓಎನ್‍ಡಿಸಿ, ಮೆಟಾ ಒಪ್ಪಂದ

Upayuktha
0



ಮಂಗಳೂರು: ಮೆಟಾದ ವ್ಯಾಪಾರ ಮತ್ತು ತಾಂತ್ರಿಕ ಪರಿಹಾರ ಪೂರೈಕೆದಾರರ ಪರಿಸರ ವ್ಯವಸ್ಥೆಯ ಮೂಲಕ ಖರೀದಿದಾರ ಮತ್ತು ಮಾರಾಟಗಾರರಿಗೆ ವಾಟ್ಸ್‍ಆಪ್‍ನಲ್ಲಿ ನಿರಂತರ ಸಂವಾದಾತ್ಮಕ ಅನುಭವಗಳನ್ನು ರೂಪಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಓಎನ್‍ಡಿಸಿ ಮತ್ತು ಮೆಟಾ ಪಾಲುದಾರಿಕೆ ಮಾಡಿಕೊಂಡಿವೆ.


ಸಣ್ಣ ವ್ಯವಹಾರಗಳಿಗೆ ಡಿಜಿಟಲ್ ವಾಣಿಜ್ಯದ ಶಕ್ತಿಯನ್ನು ಬಳಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ, ಈ ವ್ಯಾಪಾರ ಪರಿಹಾರ ಪೂರೈಕೆದಾರರಿಗೆ ಅವರು ಸೇವೆ ಸಲ್ಲಿಸುವ ವ್ಯವಹಾರಗಳನ್ನು ಓಎನ್‍ಡಿಸಿ ನೆಟ್‍ವರ್ಕ್‍ಗೆ ತರುವ ಮೂಲಕ ಮತ್ತು ವ್ಯವಹಾರಕ್ಕೆ ಚಾಲನೆ ನೀಡಲು ಅವರಿಗೆ ಸಹಾಯ ಮಾಡುವ ಮೂಲಕ ಅವರಿಗೆ ಸೆಲ್ಲರ್ ಆ್ಯಪ್‍ಗಳಾಗಲು ಓಎನ್‍ಡಿಸಿ ಸಹಾಯ ಮಾಡುತ್ತದೆ ಎಂದು ಓಎನ್‍ಡಿಸಿಯ ಎಂಡಿ ಮತ್ತು ಸಿಇಓ ಟಿ. ಕೋಶಿ ಮತ್ತು ಮೆಟಾ ಇಂಡಿಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್ ಹೇಳಿದ್ದಾರೆ.


ಈ ಒಪ್ಪಂದದ ಮೂಲಕ ಮುಂದಿನ ಎರಡು ವರ್ಷಗಳಲ್ಲಿ, ಮೆಟಾ ಸ್ಮಾಲ್ ಬ್ಯುಸಿನೆಸ್ ಅಕಾಡೆಮಿಯ ಮೂಲಕ ಐದು ಲಕ್ಷ ಎಂಎಸ್‍ಎಂಇಗಳ ಡಿಜಿಟಲ್ ಕೌಶಲ್ಯವನ್ನು ಹೆಚ್ಚಿಸಲಾಗುವುದು. ದೇಶದಾದ್ಯಂತ 10 ಮಿಲಿಯನ್ ಸಣ್ಣ ವ್ಯವಹಾರಗಳಿಗೆ ಕೌಶಲ್ಯವನ್ನು ಹೆಚ್ಚಿಸುವ ಮೆಟಾದ ಬದ್ಧತೆಯಿಂದ ಜನಿಸಿದ ಮೆಟಾ ಸ್ಮಾಲ್ ಬ್ಯುಸಿನೆಸ್ ಅಕಾಡೆಮಿಯು ಮೆಟಾ ಆ್ಯಪ್‍ಗಳಲ್ಲಿ ಬೆಳೆಯಲು ನಿರ್ಣಾಯಕ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳನ್ನು ಪಡೆಯಲು ಉದ್ಯಮಿಗಳು ಮತ್ತು ಮಾರಾಟಗಾರರಿಗೆ ಶಕ್ತಿ ನೀಡಲು ಪ್ರಮಾಣೀಕರಣ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top