ಕೆನರಾ ಕಾಲೇಜಿನಲ್ಲಿ ಹೆಚ್‌ಐವಿ ಜಾಗೃತಿ, ವಿಚಾರಗೋಷ್ಠಿ

Upayuktha
0

ಮಂಗಳೂರು: ಕೆನರಾ ಕಾಲೇಜಿನ ಯೂಥ್ ರೆಡ್ ಕ್ರಾಸ್ ಘಟಕದ ವತಿಯಿಂದ ಹೆಚ್ಐವಿ ಜಾಗೃತಿ ವಿಚಾರಗೋಷ್ಠಿ ನಡೆಯಿತು. ಡಿ ಎಸ್ ಆರ್ ಸಿ ಸಲಹೆಗಾರರಾದ ಶ್ರೀಮತಿ ಅಕ್ಷತಾ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿದ್ದು ರೋಗದ ಬಗ್ಗೆ ಅಮೂಲ್ಯ ಒಳನೋಟಗಳನ್ನು ತಿಳಿಸಿಕೊಟ್ಟರು.


ರೋಗ ಹರಡುವಿಕೆಯ ಕಾರ್ಯ ವಿಧಾನ ಅದಕ್ಕಾಗಿ ಶಿಕ್ಷಣದ ಪ್ರಾಮುಖ್ಯತೆಯನ್ನು, ಏಡ್ಸ್ ಹರಡುವಿಕೆಯನ್ನು ಎದುರಿಸುವಲ್ಲಿ ಪೂರ್ವಭಾವಿ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಕೋವಿಡ್ -19 ಸಂಕ್ರಾಮಿಕ ರೋಗದ ನಂತರ ಹೆಚ್ಐವಿ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಸ್ಪಷ್ಟೀಕರಿಸಿದರು.


ಕೃಪಾ ಸ್ವಾಗತಿಸಿ, ಸುರಕ್ಷಾ ವಂದಿಸಿದರು. ಯೂತ್ ರೆಡ್ ಕ್ರಾಸ್ ಘಟಕದ ಅಧಿಕಾರಿಗಳಾದ ಶ್ರೀಮತಿ ರೂಪಶ್ರೀ ಕೆ.ಪಿ, ಶ್ರೀಮತಿ ರಶ್ಮಿ ಇವರು ಉಪಸ್ಥಿತರಿದ್ದರು. ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top