ನೆಟ್ಲ ಗೋಳ್ತಮಜಲು ಸರಕಾರಿ ಶಾಲೆ ನೂತನ ಕಟ್ಟಡ ಉದ್ಘಾಟನೆ

Upayuktha
0

 ಶಾಲಾ ನೂತನ ಕಟ್ಟಡ ಉದ್ಘಾಟನೆ ಹಾಗೂ ವಜ್ರ ಸಂಭ್ರಮ -2023 ಕಾರ್ಯಕ್ರಮ

 




ನೆಟ್ಲ: ಬಂಟ್ವಾಳ ತಾಲೂಕಿನ  ಗೋಳ್ತ ಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಇಲ್ಲಿ  ನೂತನವಾಗಿ 27.80 ಲಕ್ಷ ರೂಪಾಯಿ ವೆಚ್ಚದಲ್ಲಿ  ನಿರ್ಮಾಣಗೊಂಡ  ತರಗತಿ ಕೊಠಡಿ ಉದ್ಘಾಟನೆಯನ್ನು  ಡಿಸೆಂಬರ್ 23 ಶನಿವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ನೆರೆವೇರಿಸಿ  ನನ್ನ ಕ್ಷೇತ್ರದ ಯಾವುದೇ ಶಾಲೆಗಳಲ್ಲಿಯೂ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳು ಪ್ರಾರಂಭವಾಗಬೇಕು. ನನ್ನನ್ನು ಸೇರಿ ಯಾವುದೇ ವ್ಯಕ್ತಿಗಳನ್ನು ಕಾಯುವ ಅವಕಾಶ ನೀಡಬಾರದು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಈಗಾಗಲೇ ತಿಳಿಸಿರುತ್ತೇನೆ. ಮಕ್ಕಳ ಕಾರ್ಯಕ್ರಮ ಮಕ್ಕಳಿಗೋಸ್ಕರನೆ ನಡೆಯಬೇಕು ಶಾಲೆಯ ಯಾವುದೇ ಉದ್ಘಾಟನೆ ಕಾರ್ಯಕ್ರಮಗಳು ಮಕ್ಕಳಿಂದಲೇ ನೆರವೇರಬೇಕೆಂಬುದು ನನ್ನ ಆಶಯ, ಹಳ್ಳಿ ಪ್ರದೇಶದ ಶಾಲೆಗಳಲ್ಲಿ ಮಾತ್ರ ಯಾವುದೇ ಸಮಾರಂಭಗಳು ನಮ್ಮೂರಿನ ಸಂಭ್ರಮವೆಂದು ಸಂಭ್ರಮಿಸುತ್ತಾರೆ ಎಂದರು.  




ಊರಿನ ಹಿರಿಯರಾದ ರಾಮಚಂದ್ರ ಬನ್ನಿತಾಯ ಧ್ವಜಾರೋಹಣ ಮಾಡುವ ಮೂಲಕ ಶಾಲಾ ನೂತನ ಕಟ್ಟಡ ಉದ್ಘಾಟನೆ ಹಾಗೂ ವಜ್ರ ಸಂಭ್ರಮ -2023 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.                  




ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ಹೆತ್ತವರಿಗೆ ಬಹಳ ಮುಖ್ಯ, ಸರಕಾರವು ತರಗತಿಗೆ ಒಬ್ಬರು  ಶಿಕ್ಷಕರನ್ನು ನೇಮಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯು  ಶೈಕ್ಷಣಿಕ ಹಬ್ಬವಾಗಿ ಪರಿವರ್ತನೆಯಾಗಿದ್ದು ಬೇರೆ ಜಿಲ್ಲೆಯ ಶಾಲಾಭಿವೃದ್ಧಿ ತಂಡಗಳು ನಮ್ಮ ಜಿಲ್ಲಾ ಶಾಲೆಗಳಿಗೆ ಭೇಟಿ ನೀಡಿ ಇಲ್ಲಿ ಮಾಡಿದಂತ  ಅಭಿವೃದ್ಧಿಯನ್ನು ತಮ್ಮ ಊರಿನ  ಶಾಲೆಗಳಲ್ಲೂ ಅವಲಡಿಸುತ್ತಿದ್ದಾರೆ ಎಂದರು. 




ಕಾರ್ಯಕ್ರದಲ್ಲಿ ಗೋಳ್ತ ಮಜಲು  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ, ಉಪಾಧ್ಯಕ್ಷರಾದ ಜಯಂತ ಮುಕ್ಕಾರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಭಿಷೇಕ್, ಸವಿತಾ, ದೀಪಕ್ ಕುಮಾರ್,  ಹರಿಣಾಕ್ಷಿ,ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ   ಜ್ಯೋತಿ, ನೆಟ್ಲಶಾಲಾ ನಿವೃತ್ತ ಮುಖ್ಯೋಪಾಧ್ಯಾಯಣಿ ಸೆಲೀನಾ ಪಿಂಟೋ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್,ಮೊದಲಾದವರು ಉಪಸ್ಥಿತರಿದ್ದರು.                        




ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದ ಮೊದಲು  ಶಾಲಾ ಮಕ್ಕಳಿಂದ ವಿವಿಧ ಶಾರೀರಿಕ ಪ್ರದರ್ಶನ, ರಸಮಂಜರಿ  ಕಾರ್ಯಕ್ರಮ ನೆರೆವೆರಿತು.  ಶಾಲಾ ಮಕ್ಕಳ ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ಶೋಭಾಲತಾ ಸ್ವಾಗತಿಸಿ, ಶಿಕ್ಷಕಿಇಂದಿರ ಬಹುಮಾನ ಪಟ್ಟಿ ವಾಚಿಸಿ, ಶಿಕ್ಷಕಿ ನಿಶ್ಮಿತ ವಂದಿಸಿ, ಸಹ ಶಿಕ್ಷಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top