ಮಂಗಳೂರು: ಯಕ್ಷಗಾನ ಕಲೆಯನ್ನು ನಂಬಿದವ ಎಂದೂ ಸೋತ ಇತಿಹಾಸವಿಲ್ಲ. ಯಾವುದೇ ಕಲೆಯನ್ನು ಗೌರವಿಸಿದರೂ ಅದುವೇ ಕಲಾವಿದನಿಗೆ ಗೌರವವನ್ನು ತಂದು ಕೊಡುತ್ತದೆ. ಸುಬ್ರಹ್ಮಣ ಶಾಸ್ತಿಗಳೂ ಹಾಗೆಯೇ ಶ್ರೀಕ್ಷೇತ್ರದ ಪರಮ ಭಕ್ತರಾಗಿದ್ದು, ಕಟೀಲಮ್ಮನ ಸೇವೆ ಮಾಡುತ್ತಾ ಕಲಾರಾಧಾಕರಾಗಿದ್ದಾರೆ. ಆ ಕಾರಣಕ್ಕಾಗಿಯೇ ಇಂದು ಶ್ರೀಕ್ಷೇತ್ರದಲ್ಲಿ ವಿಶೇಷ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಅವರಿಗೆ ಇನ್ನು ಮುಂದೆಯೂ ಯಕ್ಷ ಸೇವೆ ಮಾಡಲು ಶ್ರೀ ಅನಂತ ಪದ್ಮನಾಭ ಸ್ವಾಮಿ ಅನುಗ್ರಹಿಸಲಿ ಎಂದು ಶ್ರೀಕ್ಷೇತ್ರ ಕುಡುಪುನ ಆನುವಂಶಿಕ ಮೊಕ್ತೇಸರ ರೂ., ಕ್ಷೇತ್ರ ತಂತ್ರಿಗಳೂ ಆದ ವೇ|| ಮೂ||ಕೆ.ನರಸಿಂಹ ತಂತ್ರಿಗಳು 18ನೇ ವರ್ಷಾ ಚರಣೆಯಲ್ಲಿರುವ ಯಕ್ಷ ಮಿತ್ರರು ಕುಡುಪು ಸಂಸ್ಥೆಯಾ ಮೂಲಕ ಯಕ್ಷಗಾನ ಹಿಮ್ಮೆಳ ಕಲಾವಿದ ಮಣಿಮುಂಡ ಶ್ರೀ ಸುಬ್ರಹ್ಮಣಶಾಸ್ತ್ರಿಗಳನ್ನು ಸನ್ಮಾನಿಸುತ್ತಾ ಆಶೀರ್ವಚನವಿತ್ತರು.
ವೇ || ಮೂ||ಕೆ.ಕೃಷ್ಣರಾಜ ತಂತ್ರಿಗಳು ' ಖ್ಯಾತ ವಾಸ್ತು ತಜ್ಞರೂ, ಯಕ್ಷ ಮಿತ್ರರು ಕುಡುಪು ಸಂಸ್ಥೆಯ ಅಧ್ಯಕ್ಷರು ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಪ್ರಸ್ತಾವನೆ ಮಾಡಿ ಅತಿಥಿ - ಅಭ್ಯಾಗತರನ್ನು ಸ್ವಾಗತಿಸಿದರು. ಯಕ್ಷಗುರು - ಕಲಾವಿದ ವರ್ಕಾಡಿ ಶ್ರೀ ರವಿ ಅಲೆವೂರಾಯ ಅಭಿನಂದನಾ ಮಾತುಗಳನ್ನಾಡಿದರು. ಶ್ರೀ ರಾಘವೇಂದ್ರ ಕುಡುಪು ಸನ್ಮಾನ ಪತ್ರ ವಾಚಿಸಿದರು. ಇನ್ನೋರ್ವ ಕುಡುಪು ವಿವಿದ್ದೋದ್ದೇ.ಶ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾದ ಶ್ರೀ. ಜನಾರ್ಧನ ಕುಡುಪು ರವರನ್ನು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕ್ಷೇತ್ರದ ಮೊಕ್ತೇಸರರುಗಳಾದ ಶ್ರೀ ಮನೋಹರ ಭಟ್, ಮಾಜಿ ಮೇಯರ್ ಭಾಸ್ಕರ ಕೆ, ಶುಭಾಶಂಸನೆಗೈದರು. ಕುಡುಪು ಶ್ರೀ ವಾಸುದೇವ ರಾವ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ಸನ್ಮಾನ ಕಾರ್ಯಕ್ರಮದ ಬಳಿಕ ಹಿರಿಯಡ್ಕ ಮೇಳದಿಂದ ಕಾರ್ತವೀರ್ಯಾರ್ಜನ- ಭಾರ್ಗವ ವಿಜಯ ಎಂಬ ತೆಂಕುತಿಟ್ಟಿನ ಬಯಲಾಟ. ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ