ಡಿ.25: ರಾಮಕೃಷ್ಣ ಮಿಷನ್ ಬಾಲಾಕಾಶ್ರಮದಲ್ಲಿ ವಾರ್ಷಿಕೋತ್ಸವ

Upayuktha
0




ಮಂಗಳೂರು: ರಾಮಕೃಷ್ಣ ಮಿಷನ್ ಬಾಲಾಕಾಶ್ರಮದಲ್ಲಿ ಡಿ.25 ಸೋಮವಾರ ವಾರ್ಷಿಕೋತ್ಸವ 2023-2024 ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆಗೆ ಸ್ವಾಮಿ ವಿವೇಕಾನಂದ ಸಭಾಂಗಣ ರಾಮಕೃಷ್ಣ ಮಠ, ಮಂಗಳಾದೇವಿ ರಸ್ತೆ ಮಂಗಳೂರಿನಲ್ಲಿ ನಡೆಯಲಿದೆ. 




ಈ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ಹಾಗೂ ಆಶೀರ್ವಚನವನ್ನು ಸ್ವಾಮಿ ಜಿತಕಾಮಾನಚಿದಜೀ ಮಹಾರಾಜ್ ಅಧ್ಯಕ್ಷರು ರಾಮಕೃಷ್ಣ ಮಠ ಮಂಗಳೂರು ಇವರು ನಡೆಸಿ ಕೊಡಲಿದ್ದಾರೆ.




ಮುಖ್ಯ ಅತಿಥಿಯಾಗಿ ನಾರಾಯಣ ನಾಯಕ್ ನಿವೃತ್ತ ಶಿಕ್ಷಕರು ಬಂಟ್ವಾಳ, ನಾಗರಾಜ ಬಜಾಲ್ ಸಂಯೋಜಕರು, ಹೆಚ್. ಎಸ್ ಶ್ರೀರಾಮಕೃಷ್ಣ ನಿವೃತ್ತ ಕನ್ನಡ ಪ್ರಾಧ್ಯಾಪಕರು, ಎವರೆಸ್ಟ್ ಕ್ರಾಸ್ತಾ ಮುಖ್ಯೋಪಾಧ್ಯಾಯರು ಕಾಸ್ಸಿಯಾ ಪ್ರೌಢಶಾಲೆ ಮಂಗಳೂರು ಇವರುಗಳು ಭಾಗವಹಿಸಲಿದ್ದಾರೆ. 




ಲಕ್ಷಣ್ ಕುಮಾರ್ ಮರಕಡ ಅವರ ಮಾರ್ಗದರ್ಶನದಲ್ಲಿ ಗೋವರ್ಧನೋದ್ಧಾರಣ ಎಂಬ ಪ್ರಸಂಗ ಜೊತೆಗೆ ಭರತನಾಟ್ಯ ಕಲಾವಿದರೂ ಹಾಗೂ ಧಾರಾವಾಹಿಯ ನಟನೆಯೂ ಆದಂತಹ ಶ್ರೀಮತಿ ದೀಪಾ ಕೆ.ಎನ್. ಅವರ ವಿಶೇಷ ಮಾರ್ಗದರ್ಶನ ದಲ್ಲಿ ಸಂಗೀತ ನೃತ್ಯ ರೂಪಕದಲ್ಲಿ ಬಾಲಕಾಶ್ರಮದ ಮಕ್ಕಳು ಅಭಿನಯಿಸಲಿದ್ದಾರೆ. 





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top