ಮಂಗಳೂರು: ಪ್ರಮುಖ ಆರೋಗ್ಯ ಸಂಸ್ಥೆಯಾದ ಕಿಂಡರ್ ವುಮೆನ್ಸ್ ಹಾಸ್ಪಿಟಲ್ ಮತ್ತು ಫರ್ಟಿಲಿಟಿ ಸೆಂಟರ್ 2023ರ ಪ್ರತಿಷ್ಠಿತ ಟೈಮ್ಸ್ ಹೆಲ್ತ್ ಎಕ್ಸಲೆನ್ಸ್ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.
ಈ ಪ್ರತಿಷ್ಠಿತ ಪ್ರಶಸ್ತಿಯು ಗುಣಮಟ್ಟದ ಆರೋಗ್ಯ ಸೇವೆ ಮತ್ತು ರೋಗಿಗಳ ತೃಪ್ತಿಗೆ ಅದರ ಬದ್ಧತೆಯ ಪ್ರದರ್ಶನವನ್ನು ಆಧರಿಸಿ ನೀಡುವ ಪ್ರಶಸ್ತಿಯಾಗಿದ್ದು, ಈ ಆಸ್ಪತ್ರೆಯನ್ನು "ಅತ್ಯುತ್ತಮ ಉದಯೋನ್ಮುಖ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ" ಎಂದು ಗುರುತಿಸಿದೆ ಎಂದು ಕಿಂಡರ್ ಹಾಸ್ಪಿಟಲ್ಸ್ ಸಿಇಓ ರೆಂಜಿತ್ ಕೃಷ್ಣನ್ ಹೇಳಿದ್ದಾರೆ.
ಕೃಷ್ಣನ್ ಅವರು ಸಿಓಓ ಸುಧೀಂದ್ರ ಜಿ ಭಟ್ ಮತ್ತು ಮಾರಾಟ ವಿಭಾಗದ ಮುಖ್ಯಸ್ಥ ಕಿರಣ್ ಅವರೊಂದಿಗೆ ಇಡೀ ಕಿಂಡರ್ ಕುಟುಂಬದ ಪರವಾಗಿ ಪ್ರತಿಷ್ಠಿತ ಪುರಸ್ಕಾರವನ್ನು ಸ್ವೀಕರಿಸಿದರು. ಈ ಪ್ರಶಸ್ತಿಯು ಕಿಂಡರ್ ವುಮೆನ್ಸ್ ಹಾಸ್ಪಿಟಲ್ ಮತ್ತು ಫರ್ಟಿಲಿಟಿ ಸೆಂಟರ್‍ನ ಇಡೀ ತಂಡದ ಅಚಲವಾದ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಈ ಪ್ರಶಸ್ತಿಯು ಸಹಾನುಭೂತಿಯ ಆರೈಕೆಯನ್ನು ಒದಗಿಸುವ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಅವರ ನಿರಂತರ ಬದ್ಧತೆಗೆ ಸಂದ ಮನ್ನಣೆಯಾಗಿದೆ. ಕೈಗೆಟುಕುವ ವೆಚ್ಚದಲ್ಲಿ ಸಮಗ್ರ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಅವರ ಬದ್ಧತೆಯು ಸಮಾಜದ ಎಲ್ಲಾ ಸ್ಥರಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ