ಗೋವಾ ಕನ್ನಡ ಭವನಕ್ಕೆ ಜಾಗ ಖರೀದಿ ಪರಿಶೀಲನೆಗೆ ಆಗಮಿಸಿದ ಸಚಿವ ತಂಗಡಗಿ

Upayuktha
0




ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ವತಿಯಿಂದ ಜಾಗ ಖರೀದಿಸಲು ಜಾಗ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಕಲಾ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಶುಕ್ರವಾರ ಸಂಜೆ ಗೋವಾ ರಾಜಧಾನಿ ಪಣಜಿಗೆ ಆಗಮಿಸಿದ್ದಾರೆ.


ಪಣಜಿ ಸಮೀಪದ ಖಾಸಗಿ ಹೋಟೆಲ್‍ಗೆ ಆಗಮಿಸಿದ ಸಚಿವ ತಂಗಡಗಿರವರನ್ನು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಸ್ವಾಗತ ಕೋರಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಸಾಪ ಪಣಜಿ ತಾಲೂಕಾ ಅಧ್ಯಕ್ಷ ಹನುಮಂತ ಗೊರವರ್, ಕಸಾಪ ಗೋವಾ ರಾಜ್ಯ ಘಟಕದ ಗೌ.ಕಾರ್ಯದರ್ಶಿ ಪ್ರಕಾಶ್ ಭಟ್ ಉಪಸ್ಥಿತರಿದ್ದರು.


ಸಚಿವ ಶಿವರಾಜ ತಂಗಡಗಿಯವರು ಶನಿವಾರ ಗೋವಾದ ವಿವಿಧೆಡೆ ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿರವರೊಂದಿಗೆ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಖರೀದಿಗೆ ಜಾಗ ಪರಿಶೀಲನೆ ನಡೆಸಲಿದ್ದಾರೆ.


ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ವಾಸಿಸುತ್ತಿದ್ದು, ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ಕನ್ನಡಿಗರ ಬಹು ವರ್ಷಗಳ ಕನಸಾಗಿದೆ. ಇದೀಗ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ವತಿಯಿಂದ ಜಾಗ ಖರೀದಿಗೆ ಮುಂದಾಗಿರುವುದು ಗೋವಾ ಕನ್ನಡಿಗರಿಗೆ ಸಂತಸದ ಸಂಗತಿಯಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top