'ಎಂಎಸ್‍ಎಂಇ' ಪ್ರಗತಿಗೆ ಗೋದ್ರೇಜ್ ನೆರವು

Upayuktha
0


ಮಂಗಳೂರು: ಗೋದ್ರೇಜ್ ಕ್ಯಾಪಿಟಲ್, ತನ್ನ ಪಾಲುದಾರರ ಜಾಲವನ್ನು ಗಮನಾರ್ಹವಾಗಿ ವಿಸ್ತರಿಸುವ ಮೂಲಕ ದೇಶದಲ್ಲಿ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳ (ಎಂಎಸ್‍ಎಂಇ) ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡಲು ಮುಂದಾಗಿದೆ.




ತನ್ನ ನಿರ್ಮಾಣ್ ಪ್ಲಾಟ್‍ಫಾರಂ ಮೂಲಕ, ಡಿಬಿಎಸ್ ಬ್ಯಾಂಕ್ ಇಂಡಿಯಾ, ವೀಸಾ, ಅಮೆಜಾನ್ ಮತ್ತಿತರ ಕಂಪನಿಗಳ ಜೊತೆಗಿನ ಪಾಲುದಾರಿಕೆಗಳು ಎಂಎಸ್‍ಎಂಇ ಮಾಲೀಕರಿಗೆ ಬೆಳವಣಿಗೆಯ ಅವಕಾಶಗಳನ್ನು ಒದಗಿಸುವ ಗೋದ್ರೇಜ್ ಕ್ಯಾಪಿಟಲ್‍ನ ಬದ್ಧತೆಯನ್ನು ಸೂಚಿಸುತ್ತವೆ. 'ಎಂಎಸ್‍ಎಂಇ' ಗಳನ್ನು ಸಬಲೀಕರಣಗೊಳಿಸುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿದೆ ಎಂದು ಗೋದ್ರೇಜ್ ಕ್ಯಾಪಿಟಲ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮನೀಶ್ ಶಾ ಹೇಳಿದ್ದಾರೆ.




'ಎಂಎಸ್‍ಎಂಇ"ಗಳ ವಹಿವಾಟಿನ ಪಯಣದ ಉದ್ದಕ್ಕೂ ಮೌಲ್ಯವರ್ಧಿತ ಸೇವೆಗಳ ವೈವಿಧ್ಯಮಯ ಶ್ರೇಣಿಯನ್ನು ಮತ್ತು  ಸಮಗ್ರ ಬೆಂಬಲವನ್ನು ನೀಡುವ ಉದ್ದೇಶದಿಂದ 13ಕ್ಕೂ ಹೆಚ್ಚು ಪಾಲುದಾರರನ್ನು ಸೇರಿಸಲು ನಿರ್ಮಾಣ್ ತನ್ನ ಸಹಯೋಗದ ಮಾದರಿಯನ್ನು ವಿಸ್ತರಿಸಿದೆ. ಇದು ಎಂಎಸ್‍ಎಂಇಗಳ ಗ್ರಾಹಕರ ನೆಲೆಯ ವಿಸ್ತರಣೆ, ಕಾರ್ಯಾಚರಣೆಗಳ ಸುಗಮಗೊಳಿಸುವಿಕೆ ಮತ್ತು ಉದ್ಯೋಗಿ ಉತ್ಪಾದಕತೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ವಿವರಿಸಿದ್ದಾರೆ.




ಉದ್ಯಮಿಗಳ ಅಗತ್ಯಕ್ಕೆ ತಕ್ಕಂತೆ ರೂಪಿಸಿರುವ ಚಾಲ್ತಿ ಖಾತೆ  ಒಳಗೊಂಡಿರುವ ಸಮಗ್ರ ಸ್ವರೂಪದ ಮೌಲ್ಯವರ್ಧಿತ ಸೇವೆಗಳನ್ನು   ಎಂಎಸ್‍ಎಂಇ ಗಳಿಗೆ ಕೊಡುಗೆ ನೀಡಲು  ಈ ಪಾಲುದಾರಿಕೆಯು ಡಿಬಿಎಸ್  ಬ್ಯಾಂಕ್ ಇಂಡಿಯಾಗೆ ನೆರವಾಗುತ್ತದೆ. 'ನಿರ್ಮಾಣ್'ನಲ್ಲಿ ನೋಂದಾಯಿಸಲಾದ ಉದ್ಯಮಗಳು ಈ ವಿಶೇಷ ಪ್ರಯೋಜನಗಳನ್ನು ಪಡೆಯಬಹುದಾಗಿದೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top