ಮಂಗಳೂರು: ಪ್ರಾಜೆಕ್ಟ್ ದಿಶಾ ಉಪಕ್ರಮದ ಅಂಗವಾಗಿ ನಾಲ್ಕು ರಾಜ್ಯಗಳ 2.5 ಲಕ್ಷ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಅಭಿಯಾನವನ್ನು ಅಮೃತಾಂಜನ್ ಹೆಲ್ತ್‍ಕೇರ್‍ನ ಕಾಂಫಿ ಸ್ನಗ್ ಫಿಟ್ ಹಮ್ಮಿಕೊಂಡಿದೆ.
ದೇಶಾದ್ಯಂತ 1,450 ಪಟ್ಟಣಗಳಲ್ಲಿ ಈಗಾಗಲೇ 4.5 ಲಕ್ಷ ಯುವತಿಯರಲ್ಲಿ ಜಾಗೃತಿ ಮೂಡಿಸಿರುವ ಕಂಪನಿಯು ಇದೀಗ ಮತ್ತಷ್ಟು ರಾಜ್ಯಗಳಿಗೆ ಈ ಅಭಿಯಾನವನ್ನು ವಿಸ್ತರಿಸಿದೆ. ಮೂರು ಹಂತಗಳ ಈ ಅಭಿಯಾನದ ಕೊನೆಗೆ 1,800 ಕ್ಕೂ ಹೆಚ್ಚು ಪಟ್ಟಣಗಳ 7 ಲಕ್ಷ ಹುಡುಗಿಯರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಈ ಅಭಿಯಾನದ ಭಾಗವಾಗಿ, ಅಗ್ಗದ ಹಾಗೂ ಹೆಚ್ಚು ಹೀರಿಕೊಳ್ಳುವಿಕೆಯ ಸ್ಯಾನಿಟರಿ ಪ್ಯಾಟ್‍ಗಳನ್ನು ವಿತರಿಸಲಾಗುತ್ತಿದೆ. ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಹೆಚ್ಚಿಸಲು ಮತ್ತು ಬಟ್ಟೆಯ ಬಳಕೆಯ ಬದಲು ಸ್ಯಾನಿಟರಿ ಪ್ಯಾಡ್‍ಗಳನ್ನು ಬಳಸುವ ಪ್ರಯೋಜನಗಳ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ಎಂಡಿಎಸ್. ಶಂಭು ಪ್ರಸಾದ್ ಹೇಳಿದ್ದಾರೆ.
ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಅಗತ್ಯ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಲಭ್ಯತೆಗೆ ಅವರಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಸಬಲಗೊಳಿಸುವುದು ಈ ಅಭಿಯಾನದ ಆದ್ಯತೆಯಾಗಿದೆ. ನೈರ್ಮಲ್ಯ ಉತ್ಪನ್ನ ಮತ್ತು ಜ್ಞಾನದ ಲಭ್ಯತೆಯು ಅವರ ಆರೋಗ್ಯವನ್ನು ರಕ್ಷಿಸುವ ಜತೆಗೆ ಅವರನ್ನು ಸಬಲಗೊಳಿಸುತ್ತದೆ, ಅವರ ಸ್ವಾಭಿಮಾನ ಮತ್ತು ಘನತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಶಿಕ್ಷಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಬಣ್ಣಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ