ಪೆರ್ನಾಜೆಯಲ್ಲಿ ಒಂಟಿ ಸಲಗದ ರಂಪಾಟ

Upayuktha
0


ಪೆರ್ನಾಜೆ: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಮುಂಜಾನೆ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿ ರಂಪಾಟ ನಡೆಸಿದೆ. ಒಂದು ತೆಂಗಿನ ಮರ, ಎರಡು ಅಡಿಕೆ ಮರ, ಮೂರು ಬಾಳೆ, ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ ತಿಂದು ಹಲವು ಬೈನೇ ಮರಗಳನ್ನು ನಾಶ ಮಾಡಿ ಕೆರೆಯಲ್ಲಿ ಈಜಾಡಿದೆ. ಸಮೀಪದ ರಾಘವೇಂದ್ರ ಭಟ್ರ ತೋಟದಲ್ಲೂ ಮೂರು ಬಾಳೆ ಗಿಡಗಳನ್ನು ನಾಶ ಮಾಡಿದೆ.


ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ನೂಜಿಬೈಲು ತನಕ ಹಾನಿಗೊಳಿಸಿದೆ. ಅರಣ್ಯ ಇಲಾಖೆಯವರು ರಾತ್ರಿ ಸುತ್ತುವರಿಯುತ್ತಿದ್ದರೂ ಕೃಷಿ ಹಾನಿ ಮಾಡುತ್ತಲೇ ಇದೆ. ಇನ್ನಾದರೂ ಪ್ರಾಣ ಹಾನಿಯಾಗದಂತೆ ಕೃಷಿಕರು ಎಚ್ಚರ ವಹಿಸಬೇಕಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top