ಎಸ್‌ಡಿಎಂ ಕಾಲೇಜ್ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಕೃಷಿ ವೀಕ್ಷಣೆ, ಸಂದರ್ಶನ

Upayuktha
0

ಪೆರ್ನಾಜೆ: ಸಿಮೆಂಟ್ ಶೀಟ್ ನಲ್ಲೂ ಪುತ್ತೂರು ಕೃಷಿಕನ ನೂತನ ಆವಿಷ್ಕಾರ ಇದರ ಕವರ್ ಸ್ಟೋರಿಗಾಗಿ ಎಸ್ ಡಿಎಂ ಕಾಲೇಜ್ ಉಜಿರೆಯ ವಿದ್ಯಾರ್ಥಿಗಳು ಪೆರ್ನಾಜೆಯ ಕೃಷಿ ತೋಟಕ್ಕೆ ಭೇಟಿ ನೀಡಿದರು.


ಎಂಸಿಜೆ ವಿಭಾಗದ ನೈದಿಲೆ, ನಮಿತಾ, ಸಮರ್ಥ್ ಭಟ್ ಮತ್ತು ಪ್ರಸನ್ನ ಗೌಡ ಅವರನ್ನೊಳಗೊಂಡ ತಂಡ ಎಸ್‌ಡಿಎಂ ಮಲ್ಟಿ ಮೀಡಿಯಾ ಸ್ಟುಡಿಯೋ -ನಮ್ಮೂರ ವಾರ್ತೆ ಕಾರ್ಯಕ್ರಮಕ್ಕಾಗಿ ಸಂದರ್ಶನ ನಡೆಸಲು ಆಗಮಿಸಿತ್ತು.


ಕುಮಾರ್‌ ಪೆರ್ನಾಜೆಯವರು ಸಿಮೆಂಟ್ ಶೀಟ್‌ನಲ್ಲಿ ಜೇನು ಪೆಟ್ಟಿಗೆ, ಜೇನು ಕೃಷಿ, ಮುಜಂಟಿ ಜೇನು, ಹನಿ ಪಾರ್ಕ್, ಕಾಫಿ, ಕಾಳುಮೆಣಸು ಮುಂತಾದ ವೈವಿಧ್ಯಮಯ ಕೃಷಿಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.


ಪರಿಸರಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಈ ವಿನೂತನ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಅಡಿಕೆಗೆ ಔಷಧಿ ಸಿಂಪಡಿಸುವ ಬೋರ್ಡೋ ದ್ರಾವಣ ಟೆಕ್ನಿಕ್, ಮಂಗಗಳ ಹಾವಳಿಗೆ ಕೋತಿ ಕೋವಿ ಹೀಗೆ ಹಲವಾರು ಆವಿಷ್ಕಾರಗಳು ಮಾಡಿದ್ದಾರೆ. ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ಕಲಾ ನಿರ್ದೇಶಕರಾಗಿ ಸಮಾಜಮುಖಿ ವ್ಯಕ್ತಿತ್ವ ಅವರದು. ಸೌಮ್ಯ ಪೆರ್ನಾಜೆ, ನಂದನ್, ಚಂದನ್ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top