
ಬೆಂಗಳೂರಿನ ಇಂಡಸ್ ಬ್ಯುಸಿನೆಸ್ ಅಕಾಡೆಮಿಯಲ್ಲಿ ಆಯೋಜನೆ
ಬೆಂಗಳೂರು: ಇಂಡಸ್ ಬ್ಯುಸಿನೆಸ್ ಅಕಾಡೆಮಿಯು (ಐ.ಬಿ.ಎ) 'ಅರ್ಥಶಾಸ್ತ್ರದ ಮುಖಾಮುಖಿ: ದೈನಂದಿನ ಜೀವನದಲ್ಲಿ ಅರ್ಥಶಾಸ್ತ್ರ' ಎಂಬ ವಿಷಯದ ಬಗ್ಗೆ ಇಕೋಫ್ಲುಯೆನ್ಸ್-23-ಅರ್ಥಶಾಸ್ತ್ರ ಸಂಶೋಧನಾ ಚಾಂಪಿಯನ್‌ಶಿಪ್ ಅನ್ನು ಡಿಸೆಂಬರ್ 9 ರಂದು ಆಯೋಜಿಸಿದೆ.
ಸಮ್ಮೇಳನವು ರಾಯಪುರದ ಪಂ. ಆರ್.ಎಸ್. ಶುಕ್ಲ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಭಾರತೀಯ ಅರ್ಥಶಾಸ್ತ್ರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ|| ರವೀಂದ್ರ ಬ್ರಹ್ಮೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
• ಇಕೋಫ್ಲುಯೆನ್ಸ್ ಇದರ ಗುರಿ: ಸುದೀರ್ಘ ಕಾಲದವರೆಗೆ, ಆದರೆ ಬಹಳ ಕಡಿಮೆ ಗಮನ ಸೆಳೆದಂತಹ ಕುತೂಹಲ ಕೆರಳಿಸಿದ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ಕೈಗೊಳ್ಳುವುದು.
• ಮೌಲ್ಯದ ಪ್ರತಿಪಾದನೆ: ನಮ್ಮ ದಿನ ನಿತ್ಯದ ವಿಶಾಲ ಪರದೆಯ ಜೀವನವನ್ನು ಬಿಂಬಿಸುವ ಅರ್ಥಶಾಸ್ತ್ರವನ್ನು ಗೇಮಿಫೈ ಮಾಡಲು ಸ್ಪರ್ಧಾತ್ಮಕ ಕಾರ್ಯಕ್ರಮ
• ಉದ್ದೇಶಿತ ವಿಭಾಗ: ವಿಭಿನ್ನ ಆಸಕ್ತಿಯ ಆರ್ಥಿಕ ಪರಿಕಲ್ಪನೆಯನ್ನು ಹೊಂದಿರುವ ಮನಸ್ಸುಗಳಿಗೆ ಹಾಗೂ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಪ್ರತಿಯೋರ್ವರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ
ಸ್ಪರ್ಧೆಯ ಷರತ್ತುಗಳು: ಪ್ರಸ್ತುತಿಯು ಚಿಕ್ಕ-ಚೊಕ್ಕದಾಗಿದ್ದು, ಪರಿಭಾಷೆಗಳಿಂದ ಹೊರತಾಗಿದ್ದು, ತಜ್ಞರಲ್ಲದವರಿಗೂ ಸಹ ದೈನಂದಿನ ಮನುಷ್ಯ ಜೀವನದ ಅರ್ಥಶಾಸ್ತ್ರವನ್ನು ಸುಸ್ಪಷ್ಟಗೊಳಿಸುವ ಧ್ಯೇಯ ಹೊಂದಿರಬೇಕು, ಬಿಟ್ಸ್ ಪಿಲಾನಿ, ಬಾಬಾಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಲೋಯಲಾ ಕಾಲೇಜು, ಚೆನ್ನೈ, ಸಿಂಬೋಸಿಸ್ ವಿಶ್ವವಿದ್ಯಾಲಯ, ಮುಂತಾದ ಕಡೆಯಿಂದ ಭಾಗವಹಿಸಲಿದ್ದಾರೆ. ಇಲ್ಲಿಯವರೆಗೂ 25 ನಮೂದುಗಳು ಬಂದಿದ್ದು ಹಾಗೂ ಪರಿಷ್ಕರಿಸಿದ್ದು, ಅವುಗಳಲ್ಲಿ ಮುಖ್ಯ ಎಂಟು ನಮೂದುಗಳು ಅಂತಿಮ ಹಂತಕ್ಕೆ ಹೋಗುತ್ತವೆ. ಒಟ್ಟು ಬಹುಮಾನದ ಮೊತ್ತ ರೂ.60,000/- ಎಂದು , ಇಂಡಸ್ ಬ್ಯುಸಿನೆಸ್ ಅಕಾಡೆಮಿಯ ಇಕೊಫ್ಲುಯೆನ್ಸ್-23 ತಾಂತ್ರಿಕ ಅಧ್ಯಕ್ಷರು ಹಾಗೂ ಸಹಾಯಕ ಪ್ರಾಧ್ಯಾಪಕ ಪ್ರೊ|| ಪ್ರಶಾಂತ್ ಕುಲಕರ್ಣಿ ಕೋರಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ