ಧರ್ಮಸ್ಥಳ ಲಕ್ಷದೀಪೋತ್ಸವ: ಭಕ್ತಿ ಸಂಗೀತ ಕಾರ್ಯಕ್ರಮ

Upayuktha
0



ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಪ್ರಯುಕ್ತ ಭಾನುವಾರ ವಸ್ತುಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಡಾ ಶ್ರುತಿ ಕಾಂತಾಜೆ ಮತ್ತು ಅವರ ಮಗಳು ಸಿಯಾ ಭಟ್ ಹಾಡಿ ಕೇಳುಗರನ್ನು ಭಕ್ತಿರಸದೊಂದಿಗೆ ಪ್ರಭಾವಿಸಿದರು. 



  

'ಗಣಪತಿಯೇ ಬುದ್ಧಿದಾತನೇ, ಸಿದ್ಧಿದಾತನೇ ಸಲಹು ಗಣೇಶನೇ' ಎಂದು ಕೋರುತ್ತಾ  ಗಾಯನವನ್ನು ಆರಂಭಿಸಿದರು. 'ನೀಡು ಶಿವಾ ನೀಡದಿರು ಶಿವಾ' ಎಂದು ದೇವರನ್ನು ಸ್ತುತಿಸಿದರು. 'ಕುರುಡು ಕಾಂಚಾಣ ಕುಣಿಯುತ್ತಲಿತ್ತು' ಎಂದು ಹಾಡಿ ಬೇಂದ್ರೆಯವರ ಕಾವ್ಯಸೊಗಡನ್ನು ಪರಿಚಯಿಸಿದರು. 'ಸೋಜುಗದ ಸೂಜಿ ಮಲ್ಲಿಗೆ' ಹಾಡನ್ನು ಪ್ರಸ್ತುತಪಡಿಸಿದರು.





ಆರು ವರ್ಷದ ಸಿಯಾ ಭಟ್ 'ಕಾಣದಂತೆ ಮಾಯವದನೋ ನಮ್ಮ ಶಿವ', 'ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ' ಹಾಡುಗಳನ್ನು  ಹಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಗಾನ ಸುಧೆ ಕೊನೆಯಲ್ಲಿ 'ಮಹಾಪ್ರಾಣ ದೀಪಂ' ಹಾಡಿನೊಂದಿಗೆ ಸಮಾರೋಪಗೊಂಡಿತು.  ಕೀಬೋಡ್ರ್ನಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು ಕಲಾವಂತಿಕೆಯನ್ನು ಮೆರೆದರು. ರಿದಂ ಪ್ಯಾಡ್ ಸಾಥ್ ನೀಡಿದ ರವಿಕಾಂತ ಕಾಸರಗೋಡು ಹಾಗೂ ತಬಲ ವಾದನದೊಂದಿಗೆ ಪ್ರಶಾಂತ್ ಬಾಳಿಗ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು.



- ಕೇಶವತಿ

ದ್ವಿತೀಯ  ಎಂ.ಎ 

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top