ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Upayuktha
0


ಉಜಿರೆ: ಧರ್ಮಸ್ಥಳದ ಯಕ್ಷಗಾನ ಮಂಡಳಿಯ ಸೇವಾ ಹರಿಕೆ ಬಯಲಾಟ ಪ್ರದರ್ಶಕ್ಕಾಗಿ ಶನಿವಾರ ತಿರುಗಾಟ ಪ್ರಾರಂಭಗೊಂಡಿದೆ.

ಧರ್ಮಸ್ಥಳದಲ್ಲಿ ಶನಿವಾರ ಪೂರ್ವಾಹ್ನ ಗಂಟೆ 8:30ಕ್ಕೆ ಛತ್ರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ಯಕ್ಷಗಾನ ಮೇಳದ ಶ್ರೀ ಗಣಪತಿ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಮಂಜುಕೃಪಾ ನಿವಾಸಕ್ಕೆ ಕೊಂಡು ಹೋಗಿ ಅಲ್ಲಿ ಗಣಹೋಮ ಮತ್ತು ಮಹಾಪೂಜೆ ನೆರವೇರಿಸಲಾಯಿತು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಯಕ್ಷಗಾನ ಕಲಾವಿದರು, ಮೇಳದಲ್ಲಿ  ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಮತ್ತು ಪುಷ್ಪರಾಜ ಶೆಟ್ಟಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


2024ರ ಮೇ 23ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಕ್ತಾದಿಗಳಿಂದ ಹರಿಕೆ ಸೇವಾ ಬಯಲಾಟ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 7 ಗಂಟೆಯಿಂದ 12 ಗಂಟೆವರೆಗೆ ಕಾಲಮಿತಿ ಯಕ್ಷಗಾನ ಪ್ರದರ್ಶನದಲ್ಲಿ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಾದರಪಡಿಸಲಾಗುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top