
ಬೆಂಗಳೂರು: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್ ಪ್ರಸ್ತುತಪಡಿಸುವ ಗೀತಾಮಹೋತ್ಸವಃ ಎಂಬ ಅಖಂಡಗೀತಾಪಾರಾಯಣ- ಸಾವಿರಾರು ಜನರಿಂದ ಭಗವದ್ಗೀತೆಯ 18 ಅಧ್ಯಾಯಗಳ ಸಮರ್ಪಣೆ ಡಿ.31ರಂದು ನಡೆಯಲಿದೆ.
ಬೆಂಗಳೂರಿನ ಮಲ್ಲೇಶ್ವರಮ್ 13ನೇ ಅಡ್ಡರಸ್ತೆಯ ಬಾಲಕಿಯರ ಶಾಳೆಯ ಆವರಣದಲ್ಲಿರುವ ರೋಟರಿ ಸಭಾಂಗಣದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12:30ರ ವರೆಗೆ ಈ ವಿಶೇಷ ಕಾರ್ಯಕ್ರಮ ನೆರವೇರಲಿದೆ.
ಗೀತಾಮಹೋತ್ಸವದಲ್ಲಿ ಗೀತಾಸಾಧಕರು, ಸಂಸ್ಕೃತಜ್ಞರು, ಕಲಾವಿದರು, ಸಾಹಿತಿಗಳು, ನಟರು ಹೀಗೆ ಹಲವಾರು ಕ್ಷೇತ್ರಗಳ ಗಣ್ಯಮಾನ್ಯರು ಭಾಗಿಗಳಾಗಲಿದ್ದಾರೆ.
ಗೀತಾಚಾರ್ಯ ಭಗವಾನ್ ಶ್ರೀಕೃಷ್ಣನಿತ್ತ ಗೀತೆಯನ್ನು ಅವನಿಗೇ ಅರ್ಪಿಸಿ ಕೃತಾರ್ಥರಾಗುವ ಈ ವಿಶೇಷ ಕಾರ್ಯಕ್ರಮದ ಬಳಿಕ ಪ್ರಸಾದ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಪ್ರತಿಷ್ಠಾನದ ವರಿಷ್ಠರಾದ ಡಾ. ಗಣಪತಿ ಹೆಗಡೆ ಅವರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ಸಂಯೋಜಕರಾದ ಎ.ಜಿ ನಾಯಕ್ (9449047372) ಮತ್ತು ಬದರಿನಾಥ್ (8041708234) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ