ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ, ಆದರೆ ಇಲ್ಲಿ ಸತ್ಯವಂತರಿಗೆ ಕಾಲವೇ ಇಲ್ಲ. ಸತ್ಯ - ಸುಳ್ಳು, ನ್ಯಾಯ - ಅನ್ಯಾಯಗಳ ಪ್ರಪಂಚದಲ್ಲಿ ನಾವಿದ್ದು ಬದುಕಲು ಕಲಿಯುವಷ್ಟರಲ್ಲಿ ಸುಳ್ಳಿನ ಪ್ರಬೇಧಗಳು ಹೆಚ್ಚುತ್ತಾ ಸತ್ಯವೆಂಬ ಜಗತ್ತಿನ ಲೋಕ ಮಾಯವಾಗುತ್ತಿದೆ. ನ್ಯಾಯಕ್ಕೆ ಯಾವುದೇ ಬೆಲೆ ಇರದ ಈ ಕಾಲದಲ್ಲಿ ಅನ್ಯಾಯಗಳು ಹೆಚ್ಚುತ್ತಾ ನ್ಯಾಯದ ಬೆಳಕು ಕತ್ತಲಿನತ್ತ ಮರೆಯಾಚಿದೆ. ಎಲ್ಲಿಗೂ ಹೋಯಿತು ನಮ್ಮ ಪ್ರಪಂಚ, ಎಲ್ಲಿಗೆ ಸಾಗಿತು ನಮ್ಮ ಪಯಣ, ಎಲ್ಲಿಗೆ ಸಾಗಿತು ನಮ್ಮ ಜೀವನ.
ಬದುಕೆಂಬ ಪಯಣದಲ್ಲಿ ಪಯಣಿಗರು ನಾವು. ಬದುಕು ಸಾಗಿಸುತ್ತಾ ನಮ್ಮ ಜೀವನವನ್ನು ಸಂತೋಷವಾಗಿ ಕಳೆಯುತ್ತಾ ಹೋದರೆ ಸುಳ್ಳಿನ ಕಂತೆಗಳು ಹೆಚ್ಚುತ್ತಾ ಮೋಸದ ಆಟ ಶುರುವಾಗುತ್ತಾ ಒಳ್ಳೆಯವರನ್ನು ಕೆಟ್ಟವರನ್ನಾಗಿಸಿ ಮಾಡುತ್ತಿದೆ ಈ ಜಗತ್ತು. ನ್ಯಾಯಕ್ಕೆ ಹೋರಾಡಿ ಅನ್ಯಾಯಕ್ಕೆ ಸಿಲುಕಿ, ತಪ್ಪೇ ಮಾಡದವರನ್ನು ತಪ್ಪಿತಸ್ಥರು ಎಂದು ಹೇಳಿ ಅನ್ಯಾಯಕ್ಕೆ ಗುರಿಯಾಗಿಸುತ್ತಿದ್ದಾರೆ.
ಇದೆಲ್ಲಾ ಯಾವ ಕಾರಣಕ್ಕಾಗಿ? ತಪ್ಪನ್ನೇ ಮಾಡದ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಸರಿಯೇ? ಊಸರವಳ್ಳಿಯ ಹಾಗೆ ಬಣ್ಣ ಬದಲಾಯಿಸಿದವರಿಗೆ ಯಾಕೆ ಏನೂ ಆಗುವುದಿಲ್ಲ? ಈಗ ಇದ್ದ ಮನುಷ್ಯ ಮತ್ತೆ ಇರಲಾರರು ಎಂದು ತಿಳಿದ ವ್ಯಕ್ತಿಗೆ ಯಾಕೆ ಒಳ್ಳೆಯ ಬುದ್ದಿ ಬರುವುದಿಲ್ಲ? ಅವರಿಗೆ ಶಿಕ್ಷೆಯಾಗುತ್ತಾ? ಅಥವಾ ಇನ್ನೂ ಅನ್ಯಾಯವನ್ನೇ ಮಾಡಿ ಎಲ್ಲರನ್ನೂ ದ್ವೇಷಿಸಿ ಅವನನ್ನು ಇನ್ನೂ ಕೀಳಾಗಿ ನೋಡಿದರೆ ಅವರಿಗೆ ಏನೂ ಪ್ರಯೋಜನ? ಈ ಪ್ರಶ್ನೆ ನನ್ನಲ್ಲಿ ಬರುವುದು ಮಾತ್ರವಲ್ಲ ಎಲ್ಲರೂ ಯೋಚಿಸಿರಬಹುದು.
ಈ ಪ್ರಶ್ನೆ ದೇವರಿಗೆ ಕೇಳಿದರೆ ಆ ದೇವರು ಉತ್ತರ ನೀಡಬಹುದೇ? ಅಥವಾ ಅವನೇ ಮೂಕವಿಸ್ಮಿತನಾಗಿ ಎಲ್ಲವನ್ನೂ ವೀಕ್ಷಿಸಿ ಅವನೇ ಒಂದು ನಿರ್ಧಾರಕ್ಕೆ ಬರಬಹುದೇ ಅಥವಾ ಬರದೇ ಇರಬಹುದೇ? ಇಂತಹ ಅದೆಷ್ಟೋ ವಿಷಯಗಳು ನಮ್ಮ ತಲೆಯಲ್ಲಿ ತುಂಬಾನೇ ಓದಾಡುತ್ತಿರಬಹುದು ಇದಕ್ಕೆಲ್ಲಾ ಉತ್ತರ ಸಿಗುವುದಕ್ಕೆ ತುಂಬಾನೇ ಸಮಯ ತೆಗೆದುಕೊಳ್ಳಬಹುದೇ? ಅಥವಾ ಸಮಯ ತೆಗೆದುಕೊಂಡರು ಅವರಿಗೆ ಶಿಕ್ಷೆಯಾಗಿಯೋ ಅಥವಾ ಶಿಕ್ಷೆಯಾಗದೆಯೋ ಇರಬಹುದೇ? ಒಂದು ವೇಳೆ ಅವರಿಗೆ ಶಿಕ್ಷೆಯಾದರೆ ಅದು ಯಾರಿಗೆ ಅನ್ಯಾಯ ಮಾಡಿದ್ದಾರೋ ಅವರ ಎದುರಿಗೆ ಸಿಕ್ಕರೆ ಅದಕ್ಕೆ ಒಂದು ಅರ್ಥ ಇರುತ್ತದೆ. ಇಲ್ಲವಾದರೆ ಅದು ವ್ಯರ್ಥ.
ನಮ್ಮ ಜೊತೆಗೆ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕಿ ಒಳ್ಳೆಯ ವ್ಯಕ್ತಿ ಅಂದುಕೊಂಡು ಮುಂದೆ ಸಾಗಿ ಮೋಸದ ಜಾಲವನ್ನು ಹಿಡಿದು ಇನ್ನೂ ಅನ್ಯಾಯಕ್ಕೆ ಹೋಗುತ್ತಿದ್ದಾರೆ. ಈ ಪ್ರಪಂಚದಲ್ಲಿ ಕೆಟ್ಟವರಿಗೆ ಒಳ್ಳೆಯ ಸ್ಥಾನ ಸಿಗುತ್ತಿದೆ. ಒಳ್ಳೆಯವರಿಗೆ ಜೀವನದಲ್ಲಿ ಕೆಟ್ಟದ್ದೆ ಆಗುತ್ತಿದೆ. ಚಿಕ್ಕ ಪುಟ್ಟ ಮಕ್ಕಳಿಗೆ ಏನು ಅರಿಯದು ಆದರೆ ದೊಡ್ಡವರಿಗೆ /ಹಿರಿಯರಿಗೆ ಬುದ್ದಿ ಇಲ್ಲವೇ? ಚಿಕ್ಕ ವಯಸ್ಸಿನಲ್ಲಿ ತಾಯಿ ತನ್ನ ಮಕ್ಕಳಿಗೆ ಬುದ್ಧಿಯನ್ನು ಹೇಳಿ ಜೀವನವನ್ನು ಸಾಗಿಸಿದರೆ ಶಿಕ್ಷಕರು ಅದನ್ನು ತಿದ್ದಿ ತಿಳಿ ಹೇಳಿ ಸರಿದಾರಿಗೆ ನಡೆಸುತ್ತಾರೆ. ಆದರೆ ಇಲ್ಲಿ ಬೇರೆಯೇ ನಡೆಯುತ್ತಿದೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಜೀವನಶೈಲಿ ಅವರ ಜೊತೆ ಇದ್ದು ಅವರು ಬೆಳೆಯುತ್ತಾ ಬೆಳವಣಿಗೆಯಲ್ಲಿ ಗೊತ್ತಾಗಿ ಬಿಡುತ್ತದೆ. ಅದೇ ರೀತಿ ನಮ್ಮ ಜೊತೆಗೆ ಇದ್ದವರು ಅವರ ಜೀವನ ಶೈಲಿ ಯಾವ ರೀತಿಯಲ್ಲಿ ಹೇಗೆ ಬಣ್ಣ ಬದಲಾಯಿಸುತ್ತಾರೆ ಎಂಬುದು ಗೊತ್ತಾಗುತ್ತದೆ. ಹಾಗಾದಾಗ ಮಾತ್ರ ಒಬ್ಬರ ವ್ಯಕ್ತಿ ವ್ಯಕ್ತಿತ್ವ ಜೀವನಶೈಲಿ ಹೇಗಿರುತ್ತದೆ ಎಂಬುದು ಅರ್ಥವಾಗುತ್ತದೆ. ಆಗ ಅಲ್ಲಿಂದ ದೂರವಾಗುತ್ತೇವೆಯೋ ವಿನಃ ಅವರಿಗೆ ಮತ್ತೆ ಹತ್ತಿರವಾಗುವುದಿಲ್ಲ. ಹತ್ತಿರವಾಗದೆ ದೂರವೇ ಉಳಿದರೆ ಅವರ ಮನಸ್ಸಿನಲ್ಲಿ ನಾವೊಂದು ಕೆಟ್ಟ ವ್ಯಕ್ತಿ, ಅವರೇ ಸರಿ ಇಲ್ಲ ಎಂಬ ಅನೇಕ ಮಾತುಗಳನ್ನು ಕೇಳುತ್ತೇವೆ.
ಆ ವ್ಯಕ್ತಿಗೆ ಯಾವ ವ್ಯಕ್ತಿಯೂ ಸಿಗದೇ ಇದ್ದಾಗ ನಂತರ ಬರುವುದು ನಮ್ಮ ಬುಡಕ್ಕೆ. ಅವರಿಂದ ನಮ್ಮ ಜೀವನವೇ ಹಾಳಾಯಿತು, ಇದಕ್ಕೆಲ್ಲ ಕಾರಣ ಅವರೇ, ಇದೆಲ್ಲಾ ಆಗಿದ್ದು ಅವರಿಂದಲೇ ಎಂಬ ಅನೇಕ ಕೆಟ್ಟ ಪದಗಳನ್ನು ಕೇಳಿ ಮನಸೇ ಬೇಸತ್ತು ಹೋಗುತ್ತದೆ. ನಮ್ಮ ಮನಸ್ಸಿನ ಪ್ರಕಾರ ಎಲ್ಲರೂ ನಮ್ಮವರೇ ಎಲ್ಲರಿಗೂ ಒಳ್ಳೆಯದೇ ಆಗಬೇಕು ಎಂಬ ಯೋಚನೆ ನಮ್ಮಲ್ಲಿದ್ದರೆ ಅವರ ಯೋಚನೆ ನಮ್ಮಕ್ಕಿಂತ ತುಂಬಾನೇ ಕೆಟ್ಟದಾಗಿರುತ್ತದೆ. ಇನ್ನು ಅದರಲ್ಲಿ ವಾದಕ್ಕೆ ಇಳಿದರೆ ಅನ್ಯಾಯಕ್ಕೆ ಅತಿ ಹೆಚ್ಚು ಮತ. ಅದರಲ್ಲೂ ನಮ್ಮ ವೈಯಕ್ತಿಕ ವಿಷಯದಲ್ಲಿ ತಲೆಹಾಕುವವರೇ ಅತಿ ಹೆಚ್ಚು. ಎಲ್ಲರ ಜೀವನದಲ್ಲಿ ಕಷ್ಟ ಇದ್ದೇ ಇರುತ್ತದೆ. ತೀರ ವೈಯುಕ್ತಿಕ ವಿಷಯದಲ್ಲಿ ಇಳಿದರೆ ಎಲ್ಲರ ಜೀವನವು ಅಂದುಕೊಂಡಂತೆ ಸುಲಭವಿಲ್ಲ.
ಎಲ್ಲರೂ ಅವರದ್ದೇ ಆದ ಕಷ್ಟಗಳನ್ನು ಮೆಟ್ಟಿ ನಿಂತು ಮುಂದೆ ಸಾಗಿದರೂ ಅವರಿಗೆ ಮನೆಯಲ್ಲಿ ಕಷ್ಟ ಇದೆ, ನಿಮಗೆ ಮನೆಯಲ್ಲಿ ಕಷ್ಟ ಇಲ್ಲ ಅಂತ ಹೇಳುವವರ ಸಂಖ್ಯೆಯು ಹೆಚ್ಚು. ಕಷ್ಟ ಅನುಭವಿಸುವವರಿಗೆ ಮಾತ್ರ ಕಷ್ಟದ ಬೆಲೆ ಗೊತ್ತಾಗುವುದು ಎಲ್ಲರ ಜೊತೆ ನನಗೆ ಕಷ್ಟ ಇದೆ ಅಂತ ಹೇಳಿದರೆ ಅದಕ್ಕೆ ಏನೂ ಪ್ರಯೋಜನ ಇಲ್ಲ. ಯಾಕೆಂದರೆ ಅವರವರ ಕಷ್ಟ ಅವರವರಿಗೆ ಮಾತ್ರ ತಿಳಿಯುವುದು ಯಾರೂ ಸಹಾಯಕ್ಕೆ ನಿಲ್ಲುವುದಿಲ್ಲ. ಒಬ್ಬರ ವ್ಯಕ್ತಿತ್ವವನ್ನು ಅಳೆಯುವ ಮುಂಚೆ ನಿಮ್ಮ ವ್ಯಕ್ತಿತ್ವ ಸರಿ ಇದೆಯೋ ಎಂದು ಭಾವಿಸಿ, ಎಲ್ಲರ ದೃಷ್ಟಿಕೋನ ಒಂದೇ ರೀತಿ ಇರುವುದಿಲ್ಲ. ನೀವು ಹೇಳಿದ ಅದೆಷ್ಟೋ ವಿಚಾರಗಳು ಅವರು ನಂಬುತ್ತಾರೆ. ಯಾಕೆಂದರೆ ಇದು ಅನ್ಯಾಯದ ಜಗತ್ತು. ಒಬ್ಬರ ಮನಸ್ಸಿನಲ್ಲಿ ಅವರು ಕೆಟ್ಟವರೆಂದು ಭಾವಿಸಿಕೊಂಡರೆ ಅದು ಕೆಟ್ಟವರಾಗಿಯೇ ಉಳಿಯುತ್ತೇವೆ ವಿನಃ ಒಳ್ಳೆಯವರಾಗಿ ಬದಲಾಯಿಸಲು ಸಾಧ್ಯವಿಲ್ಲ. ಕೆಟ್ಟವರು ಯಾವ ತಿದ್ದರು ಕೆಟ್ಟವರೇ ಒಳ್ಳೆಯವರು ಯಾವತ್ತಿದ್ದರೂ ಒಳ್ಳೆಯವರೇ.
ಜಗತ್ತೇ ಒಂದು ನಾಟಕ ರಂಗ. ಕಾಲ ಇನ್ನೂ ಮಿಂಚಿ ಹೋಗಿಲ್ಲ ಇವತ್ತಿನಿಂದಲೇ ಈ ಕ್ಷಣದಿಂದಲೇ ಒಳ್ಳೆಯವರಾಗುತ್ತೇವೆ ಎಂದು ಮನಸ್ಸಿನಲ್ಲಿ ದೃಢವಾಗಿ ನಿರ್ಧಾರ ಮಾಡಿದರೆ ಒಳ್ಳೆಯ ವ್ಯಕ್ತಿ ಆಗಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಯಾವತ್ತಿಗೂ ಹಾಳು ಮಾಡುವ ನಿರ್ಧಾರ ಕೈಗೊಳ್ಳಬೇಡಿ. ಇವತ್ತು ಅನ್ಯಾಯಕ್ಕೆ ಕಾಲ ಬಂದಿರಬಹುದು, ಆದರೆ ಇನ್ನೂ ನ್ಯಾಯಕ್ಕೆ ಕಾಲ ಬರಬಹುದು ಎಂದು ಬದುಕಿರುವವರು ತುಂಬಾ ಜನ ಇದ್ದಾರೆ. ಇವತ್ತಿಗೂ ಮುಖದಲ್ಲಿ ನಗೆ ಬೀರುವ ವ್ಯಕ್ತಿಯ ಮನಸ್ಥಿತಿ ಮನಃಸ್ಥಿತಿ ಸರಿ ಇಲ್ಲದಿದ್ದರೂ ಮುಖದಲ್ಲಿ ಒಂದು ಮುಗುಳ್ನಗೆ ಇರುತ್ತೆ. ಆ ಮುಗುಳ್ನಗೆಯ ಬದಲು ತಾಳ್ಮೆಯಿಂದಿರದ ಕೋಪ ಅವರಲ್ಲಿರುತ್ತದೆ, ಯಾರನ್ನೂ ಕೆಣಕಬಾರದು ಅಲ್ಲವೇ?.
- ರಮ್ಯ ಎಂ ಶ್ರೀನಿವಾಸ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ