ಎಲ್ಲಾ ಯೋಚನೆ, ಕಲ್ಪನೆಗಳು ಸಂಪೂರ್ಣ ಲಯವಾಗಿಸಿ ಮನಸ್ಸು ಶಾಂತ ಸ್ಥಿತಿಗೆ ಹೋಗುವುದೇ ಯೋಗ

Upayuktha
0

ಸ್ವಾಮೀ ಜಿತಕಾಮಾನಂದಜೀ ಮಹಾರಾಜ್ 



ಮಂಗಳೂರು: ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆಯುವ ದಶಂಬರ ತಿಂಗಳ ಯೋಗ ಶಿಬಿರ ಉದ್ಘಾಟನೆಗೊಂಡಿತು. ಬಳಿಕೆ ಸ್ವಾಮೀ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನದಲ್ಲಿ ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ÷್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತುಕ್ರಮ ವಾಗಿದೆ. ಇದು ಮನಸ್ಸು ಮತ್ತು ದೇಹದ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಮನಸ್ಸಿನಲ್ಲಿ ಬರುವ ಎಲ್ಲಾ ಯೋಚನೆ ಕಲ್ಪನೆಗಳು ಸಂಪೂರ್ಣ ಲಯವಾಗಿಸಿ, ಮನಸ್ಸು ಶಾಂತ ಸ್ಥಿತಿಗೆ ಹೋಗುವುದೇ ಯೋಗ ಎಂದು ತಿಳಿಸಿದರು. 


ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗ ಪರಿಚಯ ನಿಯಮಗಳನ್ನು ತಿಳಿಸಿದರು. ಅಷ್ಟಾಂಗ ಯೋಗವು ನಿಮ್ಮ ದೇಹವನ್ನು ಉಸಿರಾಟಾದೊಂದಿಗೆ ಸಮನ್ವಯದಲ್ಲಿ ಚಲಿಸುವಂತೆ ಮಾಡುತ್ತದೆ. ಈ ಅಭ್ಯಾಸದಲ್ಲಿ ಉಸಿರಾಟದ ಅರಿವು ವಿಶೇಷವಾಗಿ ಮುಖ್ಯವಾಗಿದೆ. ಈ ರೀತಿಯ ಚಲಿಸುವ ಧ್ಯಾನ ಮತ್ತು ಉಸಿರಾಟದ ಮೇಲೆ ನಿರಂತರ ಗಮನವು ನಿಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಸ್ಥಿರಗೊಳಿಸುತ್ತದೆ. ಒತ್ತಡದಿಂದ ನಿಮ್ಮನ್ನು ನಿವಾರಿಸುತ್ತದೆ ಮತ್ತು ಅನಗತ್ಯ ನಡವಳಿಕೆಯ ಮಾದರಿಗಳನ್ನು ಬದಲಾಯಿಸಲು ನಿಮಗೆ ಅನುವು ಮಾಡಿಕೊಡುತ್ತದೆ.  ಅಷ್ಟಾಂಗ ಯೋಗದ ಏಳನೇಯ ಮೆಟ್ಟಿಲಾದ ಧ್ಯಾನದ ಅಭ್ಯಾಸವು ವ್ಯಕ್ತಿಯನ್ನು ಸಕಾರಾತ್ಮಕ ವ್ಯಕ್ತಿತ್ವವನ್ನಾಗಿ ಮಾಡುತ್ತದೆ. ಸಕಾರಾತ್ಮಕ ಆಲೋಚನೆಗಳನ್ನು ಹೊಂದುತ್ತದೆ ಮತ್ತು ಸಕಾರಾತ್ಮಕ ಕಾರ್ಯಗಳನ್ನು ಮಾಡುತ್ತದೆ. ಧ್ಯಾನವು ಮೆದುಳಿನ ಏಕಾಗ್ರತೆ, ಸ್ಮರಣೆ, ಆತ್ಮವಿಶ್ವಾಸ, ಆಲೋಚನೆಗಳ ಸ್ಪಷ್ಟತೆ ಮತ್ತು ಇಚ್ಛಾಶಕ್ತಿಯನ್ನು ಸ್ವೀಕರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.


ಚಂದ್ರಹಾಸ ಪ್ರಾರ್ಥನೆಗೈದರು. ಶಿಷ್ಯರಾದ ಅಮೃತಾ, ಚಂದ್ರಹಾಸ ಸಹಕರಿಸಿದರು. ವಿಶೇಷ ಆಹ್ವಾನಿತರಾಗಿ ಶ್ರೀಮತಿ ಜಯಶ್ರೀ ಹಾಗೂ ಗಣೇಶ್ ಉಪಸ್ಥಿತರಿದ್ದರು. ಯೋಗ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಮಠವನ್ನು ಸಂಪರ್ಕಿಸಿರಿ ಎಂದು  ದೇಲಂಪಾಡಿಯವರು ತಿಳಿಸಿದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top