ಸಮಕಾಲಿನ ಕಲೆ ಹಾಗೂ ಚಿಕಣಿಕಲೆಯಲ್ಲಿ ಸಮನ್ವಯ ಸಾಧಿಸಿದ ಚಿತ್ರ ಕಲಾವಿದೆ ಆಶಾರಾಣಿ ವೈ.ಬಿ

Upayuktha
0



ರಿಸರಕ್ಕೆ ಸ್ಪಂದಿಸುವುದು ಮತ್ತು ಪ್ರತಿಕ್ರಿಯಿಸುವುದು ಎಲ್ಲ ಜೀವರಾಶಿಗಳ ಸಹಜ ಸ್ವಭಾವ ಪ್ರವೃತ್ತಿ. ಮನುಷ್ಯ ಕೂಡ ಇದಕ್ಕೆ ಹೊರತಾಗಿಲ್ಲ ಆದರೆ ಮನುಷ್ಯನಲ್ಲಿ ಇದೊಂದು ಶಕ್ತಿಯು ಇರುತ್ತದೆ. ಅದು ಮತ್ತೊಂದನ್ನು ನಿರ್ಮಿಸುವ ಶಕ್ತಿ ಈ ನಿರ್ಮಾಣ ಮಾಡುವ ಶಕ್ತಿಯಿಂದಲೇ ಮನುಷ್ಯ ಸುಸಂಸ್ಕೃತನೆನಿಸಿಕೊಳ್ಳುತ್ತಾನೆ. ಕಲೆ, ಸಂಗೀತ, ಸಾಹಿತ್ಯ ,ವಿಜ್ಞಾನ, ತಂತ್ರಜ್ಞಾನ, ಇವೆಲ್ಲವೂ ಸಂಸ್ಕೃತಿಯ ಅಂಗವೇ ಸರಿ. ಮನುಷ್ಯನಿಗೆ ಮೂರ್ತ ವಸ್ತುಗಳಿಂದ ಹೇಗೆ ಪ್ರೇರಣೆ ಸಿಗುತ್ತದೆಯೋ ಹಾಗೆಯೇ ಅಮೂರ್ತ ವಿಚಾರ ಮತ್ತು ಕಲ್ಪನೆಗಳಿಂದಲೂ ಪ್ರೇರಣೆ ಸಿಗುತ್ತದೆ.



ಸ್ವಾತಂತ್ರ್ಯದ ಅನ್ಯ ಮಾರ್ಗಗಳ ಅನ್ವೇಷಣೆಯಲ್ಲಿ ಹೊರಡುವವನೇ ಕಲಾವಿದನಾಗುತ್ತಾನೆ. ಇವರು ತನ್ನ ಕಲೆ ಮತ್ತು ಸಾಹಿತ್ಯದ ಮುಖಾಂತರ ಅವಶ್ಯವಾದಂತ ಅದ್ಭುತವಾದಂತ ಸ್ವಾತಂತ್ರವನ್ನು ಪಡೆದುಕೊಳ್ಳುತ್ತಾನೆ ಪಡೆದುಕೊಂಡಂತ ಅನುಭವವನ್ನು ಬಣ್ಣ, ರಾಗ ,ಅಕ್ಷರಗಳ ಮೂಲಕ ಅಭಿವ್ಯಕ್ತ ಪಡಿಸುತ್ತಾನೆ. ಆಧುನಿಕ ಯುಗದಲ್ಲಿ ಮಹಿಳೆ ಕೂಡ ಎಲ್ಲಾ ಕ್ಷೇತ್ರದಲ್ಲೂ ಪುರುಷರನ್ನು ಮೀರಿಸಿ ಅದ್ಭುತ ಸಾಧನೆಗೈದ ಮಹಿಳೆಯರು ನಮ್ಮ ದೇಶದಲ್ಲಿದ್ದಾರೆ. ಇಂಥ ಸಾಧಕರ ಸಾಲಿಗೆ ಸೇರುವಂತ ಚಿತ್ರಕಲೆಯಲ್ಲಿ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಸಾಧನೆಗೈದು ಹಲವಾರು ರಾಜ್ಯ- ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಸೃಜನಶೀಲ, ಪ್ರತಿಭಾವಂತ ಕಲಾವಿದೆ ಆಶಾ ರಾಣಿ ವೈ ಬಿ. ಇವರು ಆಧುನಿಕ ಕಲೆ ಹಾಗೂ ಚಿಕಡಿ ಕಲೆ ಎರಡರಲ್ಲೂ ಸಮನ್ವಯ ಸಾಧಿಸಿದ ನಾಡಿನ ಅಪರೂಪದ ಚಿತ್ರಕಲವಿದೆಯಾಗಿ ಕಲಾಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.




ಹುಟ್ಟಿ ಬೆಳೆದದ್ದು ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ ಬಾಲ್ಯದಲ್ಲಿಯೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಆಶಾ ರಾಣಿಯವರಿಗೆ ತಂದೆ, ತಾಯಿ, ಅಕ್ಕ, ತಮ್ಮ ರಿಂದ ಪ್ರೋತ್ಸಾಹ ದೊರಕಿತು ಇದರಿಂದಲೇ ಹಾಸನದ ಶಾಂತಲ ಲಲಿತ ಕಲಾ ಶಾಲೆಯಲ್ಲಿ ಚಿತ್ರಕಲೆಯಲ್ಲಿ ಪದವಿ ಮುಗಿಸಲು ಅನುಕೂಲವಾಯಿತು. ವಿದ್ಯಾರ್ಥಿ ದೆಸೆಯಿಂದಲೇ ಕಲೆಯಲ್ಲಿ ಶ್ರದ್ಧೆ ಇಟ್ಟುಕೊಂಡು ದೃಶ್ಯ ಕಲೆಯಲ್ಲಿ ಡಿಸ್ಟಿಂಕ್ಷನ್ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. "ಸ್ತ್ರೀ ಸಂವೇದನೆ" ಇವರ ಕಲಾ ಕೃತಿಯ ಮೂಲ ವಸ್ತು ವಿಷಯ. ಆಧುನಿಕ ಯುಗದಲ್ಲಿ ಅವಳು ಸಬಲೇ ಎಂಬ ಇವರ ಚಿಂತನೆ ಸೃಜನಶೀಲ ಮನಸ್ಸುಗಳಿಗೆ ಆಲೋಚನದಲ್ಲಿ ತೇಲಿಸುತ್ತವೆ. ಕಲಾಕೃತಿಗಳಲ್ಲಿ ವಿಭಿನ್ನ ರೀತಿಯ ಸಂಯೋಜನೆ ಹಾಗೂ ಆಶಯಗಳನ್ನು ಹೊತ್ತು ಭಾವ ಪ್ರಧಾನವಾಗಿ ನೋಡುಗರನ್ನು ಕ್ಷಣ ಕಾಲ ನಿಲ್ಲಿಸಿ ,ಆಲೋಚನೆಯ ಆಳಕ್ಕೆ ಒಯ್ಯುತ್ತದೆ.




ಒಂಟಿ ಹೆಣ್ಣಿನ ಮನದಾಳದ ಜಟಿಲತೆಯನ್ನು ಪ್ರತಿಬಿಂಬಿಸುವ ಪ್ರಯತ್ನ" ರಿಫ್ಲೆಕ್ಷನ್ ಆಫ್ ಮೂಡ್ಸ್"ಸ್ತ್ರೀ ಸಂವೇದನೆಯ ಕಲಾಕೃತಿಗಳಲ್ಲಿ ತಮ್ಮ ವಿಶಿಷ್ಟ ತಂತ್ರಗಾರಿಕೆ, ವರ್ಣ ಸಂಯೋಜನೆ, ಸೊಗಸಾದ ಮೈವಳಿಕೆಗಳಿಂದ ಕಲಾಕೃತಿಗಳು ಕಲಾ ವಿಮರ್ಶ ಕರ ಮೆಚ್ಚುಗೆ ಪಡೆದಿದೆ. ಇವರು 16 ಏಕವ್ಯಕ್ತಿ ಪ್ರದರ್ಶನ 24 ರಾಜ್ಯ- ರಾಷ್ಟ್ರೀಯ, ಅಂತರಾಷ್ಟ್ರ, ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದು 34 ಸಮೂಹ ಕಲಾ ಪ್ರದರ್ಶನ ಸುಮಾರು 26 ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು.




ಕಲಾಕ್ಷೇತ್ರದಲ್ಲಿ ನಿರಂತರ ಪ್ರಯೋಗಶೀಲರಾದ ಆಶಾರಾಣಿಯವರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಕಲಾ ಶಿಬಿರಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ ಇವರ ಶ್ರೇಷ್ಠ ಕಲಾಕೃತಿಗಳಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ 2008 ಲೋಕಮಾನ್ಯ ತಿಲಕ ರಾಷ್ಟ್ರೀಯ ಪ್ರಶಸ್ತಿ 2011 ಸೌತ್ ಸೆಂಟ್ರಲ್ ಜೋನ್ ಕಲ್ಚರ್ ಸೆಂಟರ್ ನಾಗಪುರ, ರಾಷ್ಟ್ರೀಯ ಪ್ರಶಸ್ತಿ 2005 ಮೈಸೂರು ದಸರಾ ಪ್ರಶಸ್ತಿ 19 98. 2015 .2023. ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ ದೆಹಲಿ 2010 ಡಾಕ್ಟರ್ ಸ.ಜಾ ನಾಗಲೋಟಿ ಮಠ ಜಿಲ್ಲಾ ರಾಜ್ಯ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಬೆಳಗಾವಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.




ಇತ್ತೀಚಿಗೆ ಹಿಮಾಚಲ ಪ್ರದೇಶ ಶಿಮ್ಲಾ ಹಾಗೂ ನೇಪಾಳ ಮತ್ತು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಬಂಗಾರದ ಪದಕಗಳು ಲಭಿಸಿವೆ ಇವರ ಕಲಾಕೃತಿಗಳಿಗೆ 20204ಕ್ಕೆ ಪ್ರತಿಷ್ಠಿತ ಜಹಂಗೀರ್ ಆರ್ಟ್ ಗ್ಯಾಲರಿ ಮುಂಬೈನಲ್ಲಿ ಇವರ ಏಕವ್ಯಕ್ತಿ ಹಾಗೂ ಸಮೂಹ ಕಲ ಪ್ರದರ್ಶನದ ಸಿದ್ಧತೆ ನಡೆದಿದೆ.



ಅನಂತರಾಜು ಗೊರೂರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top