ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ AICTE - ATAL ಸಹಯೋಗದೊಂದಿಗೆ ಆಯೊಜಿಸಲಾದ, ಒಂದು ವಾರದ "ಡೀಪ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಇಮೇಜ್ ಪ್ರೊಸೆಸಿಂಗ್ ಎನ್ನುವ ಫ್ಯಾಕಲ್ಟಿ ಡೆವಲಪ್ ಮೆಂಟ್ ಕಾರ್ಯಾಗಾರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಹೈದರಾಬಾದ್ ನ ಪ್ರಾಧ್ಯಾಪಕ ಪ್ರೊ. ಸಿ. ಮೋಹನ ಕೃಷ್ಣ, ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆಯ ಆಳವಾದ ಸಂಶೋಧನೆ ಹೇಗೆ ಜನಸಾಮಾನ್ಯರ ಬದುಕಲ್ಲಿ ಸುಧಾರಣೆ ತಂದಿದೆ ಎಂಬುದನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಪ್ರೊ. ಡಿ.ಎಸ್. ಗುರು ಮಾತನಾಡಿ ಉತ್ತಮ ಗುಣಮಟ್ಟದ ಹಾಗೂ ಸಮಾಜಮುಖಿಯಾದ ಸಂಶೋಧನೆ ಮಾಡಲು ಸಂಶೋಧನಾರ್ಥಿಗಳಿಗೆ ಕರೆ ನೀಡಿದರು.
ಒಂದು ವಾರದ ಅವಧಿಯ ಈ ಫ್ಯಾಕಲ್ಟಿ ಡೆವಲಪ್ ಮೆಂಟ್ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ನೆರೆರಾಜ್ಯದ ಪ್ರತಿಷ್ಟಿತ ಕಾಲೇಜುಗಳಿಂದ ಸುಮಾರು 45 ಸಂಶೋಧನಾ ಅಭ್ಯರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಐಐಐಟಿ ಅಲಹಾಬಾದ್, ಐಐಟಿ ಹೈದರಬಾದ್, ಐಐಟಿ ಮದ್ರಾಸ್, ಯೆನೆಪೋಯ ವಿಶ್ವವಿದ್ಯಾನಿಲಯ, ಕೆನಡಾದ ಟೊರಾಂಟೋ ವಿಶ್ವವಿದ್ಯಾನಿಲಯ, ಫಿಲಿಪ್ಸ್ ಬೆಂಗಳೂರು ಮತ್ತು ಸ್ಯಾಮ್ಸಂಗ್ ಬೆಂಗಳೂರು ಇಲ್ಲಿನ ಗಣ್ಯ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸದ ಜೊತೆಗೆ ಪ್ರಾಯೋಗಿಕ ತರಗತಿಗಳು ಹಾಗೂ ಇಂಡಸ್ಟ್ರೀ ಭೇಟಿ ಇತ್ಯಾದಿಗಳನ್ನೊಳಗೊಂಡಿತ್ತು.
ಈ FDP ಯನ್ನು ಸಂಯೋಜನೆ ಮಾಡಿದ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ಎಚ್. ಶೇಖರ್, ಆರು ದಿನಗಳ ಕಾಲ ನಡೆದ ಕಾರ್ಯಕ್ರಮದ ವರದಿ ವಾಚಿಸಿದರು. ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಮಂಜಯ್ಯ ಡಿ. ಎಚ್, ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಸಂಶೋಧನಾರ್ಥಿ ಶ್ರೀಮತಿ ಶಾಜಿಯಾ ವಂದಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್‍ರವರು ಕಾರ್ಯಕ್ರಮ ನಿರೂಪಿಸಿದರು.
ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಎ. ಎಂ. ಖಾನ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ಶರ್ಮಿಳಾ ಕುಮಾರಿ, ವಿಶ್ವವಿದ್ಯಾನಿಲಯ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೀರಭದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ