ವಿದ್ಯಾಥಿ೯ ಜೀವನದಲ್ಲಿ ಕಲಿತ ಪಾಠ ಜೀವನದ ಉದ್ದಕ್ಕೂ ಸಹಾಯಕ : ಸ್ವಾತಿ ಪ್ರಭಾಕರ ಶೆಟ್ಟಿ

Upayuktha
0

 ನಿಟ್ಟೆಯಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಅಂತರ್ ಕಾಲೇಜು ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯ ಪ್ರಶಸ್ತಿ ವಿತರಣೆ




ನಿಟ್ಟೆ : ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳು ಎಂದಿಗೂ ಜೊತೆ ಜೊತೆಯಾಗಿ ಸಾಗಬೇಕು. ವಿದ್ಯಾಥಿ೯ ಜೀವನದಲ್ಲಿ ಕಲಿತ ಪಾಠಗಳು ಜೀವನದ ಉದ್ದಕ್ಕೂ ಬೇರೆ ಬೇರೆ ರೀತಿಯಲ್ಲಿ ನಮಗೆ ಸಹಾಯಕ್ಕೆ ಬರುತ್ತವೆ ಎಂದು ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ವನ್ಸ್ ಅಪಾನ್ ಎ ಟೈಮ್ ಎಂಬ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯ ಸಹಸಂಸ್ಥಾಪಕಿ ಶ್ರೀಮತಿ ಸ್ವಾತಿ ಪ್ರಭಾಕರ ಶೆಟ್ಟಿ ಅಭಿಪ್ರಾಯಪಟ್ಟರು.



ಇವರು ಇತ್ತೀಚೆಗೆ ಡಾ. ಎನ್. ಎಸ್. ಎ.ಎಮ್ ಪ್ರಥಮ ದಜೆ೯ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂವ೯ ವಿಭಾಗದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪಧೆ೯ಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.




ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ. ಕೆ. ಇವರು ವಿವಿಧ ಸಾಂಸ್ಕೃತಿಕ ಸ್ಪಧೆ೯ಯಲ್ಲಿ ಭಾಗವಹಿಸಿದ ವಿದ್ಯಾಥಿ೯ಗಳನ್ನು ಅಭಿನಂದಿಸಿದರು. ಒತ್ತಡದ ಶೈಕ್ಷಣಿಕ ಚಟುವಟಿಕೆಗಳ ನಡುವೆಯೂ ಈ ರೀತಿಯ ಸ್ಪಧೆ೯ಗಳಲ್ಲಿ ಭಾಗವಹಿಸುವುದು ವಿದ್ಯಾಥಿ೯ಗಳ ಮನೋವಿಕಾಸಕ್ಕೆ ನೆರವು ನೀಡುತ್ತದೆ. ಹಾಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.




ದೀಶ್ನ -2023 ಪಿಯು ಎನಿಗ್ಮಾ ಸಮಗ್ರ ಪ್ರಥಮ ಪ್ರಶಸ್ತಿಯನ್ನು ಕ್ರೈಸ್ಟ್ ಕಿಂಗ್ ಪಿಯು ಕಾಲೇಜು ಕಾಕ೯ಳ ಪಡೆಯಿತು, ದ್ವಿತೀಯ ಸ್ಥಾನವನ್ನು  ಎನ್. ಎಸ್. ಎ.ಎಮ್ ಪಿಯು ಕಾಲೇಜು ನಿಟ್ಟೆ  ಪಡೆಯಿತು. ಶ್ರೀಮತಿ ಸ್ವಾತಿ ಪ್ರಭಾಕರ್ ಶೆಟ್ಟಿ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.




ವೇದಿಕೆಯಲ್ಲಿ ವಿದ್ಯಾಥಿ೯ ಕ್ಷೇಮಪಾಲನ ಅಧಿಕಾರಿ ಶ್ರೀ ರಮೇಶ್ ಎಂ, ಐಕ್ಯೂಎಸಿ ಸಂಯೋಜಕರಾದ ಶ್ರೀ ಪ್ರಕಾಶ್ ಬಿ, ವಿದ್ಯಾಥಿ೯ ಪರಿಷತ್ ಸಂಯೋಜಕಿ ಶ್ರೀಮತಿ ಮಾಲಿನಿ. ಜೇ.ರಾವ್, ಶ್ರೀಮತಿ ರೇಖಾ ಹಾಗೂ ವಿದ್ಯಾಥಿ೯ ಕಾಯ೯ದಶಿ೯ ಶ್ರೀಶಾ ಪ್ರಭು ಉಪಸ್ಥಿತರಿದ್ದರು. ಕುಮಾರಿ ನೇಹಾ ಸ್ವಾಗತಿಸಿದರು, ರೋಹನ್ ಸುವಣ೯ ವಂದಿಸಿದರು. ಕುಮಾರಿ ಶ್ರಾವ್ಯ ಶೆಟ್ಟಿ ಕಾಯ೯ಕ್ರಮವನ್ನು ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top