
ಕುಡ್ಲ: ತುಳು ಕೂಟ (ರಿ) ಕುಡ್ಲದ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡುತ್ತಿರುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿ- 2023ಕ್ಕೆ ಅಪ್ರಕಟಿತ ತುಳು ನಾಟಕ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಎ-4 ಹಾಳೆಯಲ್ಲಿ 60-70 ಪುಟಗಳಿಗೆ ಮೀರದಂತೆ 2023ರಲ್ಲಿ ರಚಿಸಿದ ತುಳು ಕೃತಿಗಳು ಮಾತ್ರ ಸ್ವೀಕಾರಾರ್ಹ. 2024ರ ಮಕರ ಸಂಕ್ರಾಂತಿ ತನಕ ಕೃತಿಯ ರಂಗ ಪ್ರದರ್ಶನ, ಪ್ರಕಟಣೆ ಕೂಡದು.
1976 ರಿಂದ ಈ ಪ್ರಶಸ್ತಿ ಯನ್ನು ಪ್ರತೀ ವರ್ಷ ನೀಡಲಾಗುತ್ತಿದೆ. ಕಳೆದ 46 ವರ್ಷಗಳಲ್ಲಿ ಹತ್ತು ಬಾರಿ ಪ್ರಶಸ್ತಿ ಪಡೆದವರ ಕೃತಿಯನ್ನು ಸ್ವೀಕರಿಸುವುದಿಲ್ಲ. ಸತತ ಮೂರು ವರ್ಷ ಪ್ರಶಸ್ತಿ ವಿಜೇತರ ಕೃತಿಯನ್ನು ಮಾನ್ಯ ಮಾಡುವುದಿಲ್ಲ. ಇತರ ಪುರಸ್ಕಾರಕ್ಕೆ ಆಯ್ಕೆಯಾದ / ಭಾಷಾಂತರಗೊಂಡ / ಆಧಾರಿತ ಕೃತಿಗಳನ್ನು ನಿರಾಕರಣೆ ಮಾಡಲಾಗುವುದು.
ಪೌರಾಣಿಕ, ಸಾಮಾಜಿಕ, ಚಾರಿತ್ರಿಕ, ಜಾನಪದ ಕಥಾನಕದ ಕೃತಿಗಳು ಆಗುತ್ತವೆ. ಎಲ್ಲಿಯೂ ಲೇಖಕನ ಹೆಸರು ನಮೂದಿಸಬಾರದು. ಸ್ವ -ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಕಳಿಸ ಬೇಕು. ವಿಳಾಸ, ಮೊಬೈಲ್ ಸಂಖ್ಯೆ ಸಹಿತ ಸ್ವತಂತ್ರ ಕೃತಿ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರ ನೀಡಬೇಕು. 2024 ನೇ ಜನವರಿ 10 ರ ಒಳಗೆ ತಮ್ಮ ಕೃತಿಯನ್ನು ಮರೋಳಿ ಬಿ. ದಾಮೋದರ ನಿಸರ್ಗ, ನಿಸರ್ಗ ಮನೆ, ಮರೋಳಿ, ಮಂಗಳೂರು- 575005- ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕೆಂದು ಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ (9481163531) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ