ನಿಯಮದ ನೆಪದಲ್ಲಿ ಯಕ್ಷಗಾನಕ್ಕೆ ಕಿರುಕುಳ ಖಂಡನೀಯ: ಜಿತೇಂದ್ರ ಕುಂದೇಶ್ವರ

Upayuktha
0

ಸೃಷ್ಟಿ ಕಲಾವಿದ್ಯಾಲಯ ಯಕ್ಷೋತ್ಸವ


ಮಂಗಳೂರು: ಹೆತ್ತವರು ತಮ್ಮ ಮಕ್ಕಳಿಗೆ ತಮ್ಮೂರಿನ ಸಂಸ್ಕೃತಿ, ಕಲೆಯನ್ನು ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಯಶಸ್ವಿಯಾಗಿ ದಾಟಿಸುವ ಕೆಲಸ ಮಾಡಬೇಕು ಎಂದು ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಹೇಳಿದರು.


ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಸೃಷ್ಟಿಕಲಾ ವಿದ್ಯಾಲಯದ ಯಕ್ಷೋತ್ಸವ ಉದ್ಘಾಟಿಸಿ ಮಾತನಾಡಿದರು.


ಇತ್ತೀಚೆಗೆ ಕಾನೂನು ನಿಯಮದ ಮೂಲಕ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಹತ್ತಿಕ್ಕುವ ಕಾರ್ಯ ನಡೆಸುತ್ತಿದೆ. ಕುಂದಾಪುರದ ಹೇರಿಕುದ್ರುವಿನಲ್ಲಿ ರಾತ್ರಿ 10.30ಗೆ ಸಮಯ ಮೀರಿದೆ ಎಂದು ಮಕ್ಕಳ ಯಕ್ಷಗಾನವನ್ನು ನಿಲ್ಲಿಸಿರುವುದು ಖಂಡನೀಯ ಎಂದರು. ಸೃಷ್ಟಿ ಕಲಾವಿದ್ಯಾಲಯ ನೂರಾರು ಮಕ್ಕಳಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಯಶಸ್ವಿಯಾಗಿ ಬೋಧಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಕರಾವಳಿಯ ಯಕ್ಷಗಾನ ರಾಜಧಾನಿಯಲ್ಲಿ ಎಲ್ಲೆಡೆ ವಿಜೃಂಬಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.


ಎಪಿಎಸ್‌ ಪಬ್ಲಿಕ್‌ ಸ್ಕೂಲ್‌ ಪ್ರಾಂಶುಪಾಲೆ ಶಾಲಿನಿ ಜಗದೀಶ್‌ ಮಾತನಾಡಿ, ಯಕ್ಷಗಾನ ನೋಡುವುದರಿಂದ, ಮಾಡುವುದರಿಂದ ಮನಸ್ಸಿಗೆ ಹಿತವಾಗುತ್ತದೆ ಎಂದರು.

 


ಸೃಷ್ಟಿ ಕಲಾ ವಿದ್ಯಾಲಯ ಸ್ಥಾಪಕಾಧ್ಯಕ್ಷ ಛಾಯಾಪತಿ ಕಂಚಿಬೈಲ್‌, ಭಾಗವತ ಸುಬ್ರಾಯ ಹೆಬ್ಬಾರ್ ಇದ್ದರು.


ಅನಾರೋಗ್ಯ ನಿಮಿತ್ತ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಮನೆಯಲ್ಲಿಯೇ ಸೃಷ್ಟಿ ಕಲಾಭೂಷಣ ಪ್ರಶಸ್ತಿ ನೀಡಲಾಗುವುದು ಎಂದು ವಿದ್ಯಾಲಯದ ಅಧ್ಯಕ್ಷ ಛಾಯಪತಿ ಕಂಚಿಬೈಲ್‌ ತಿಳಿಸಿದರು. ಚೆಂಡೆವಾದಕ ಶ್ರೀನಿವಾಸ ಗುಂಡ ಇದ್ದರು. ಶ್ರೀನಿವಾಸ ಕೆಮ್ತೂರು ಕಾರ್ಯಕ್ರ ನಿರೂಪಿಸಿದರು.


ಯಕ್ಷಗಾನ ಪ್ರದರ್ಶನ: ಕಲಾವಿದ ನಿತ್ಯಾನಂದ ನಾಯಕ್‌ ಮಾರ್ಗದರ್ಶನದಲ್ಲಿ ಸುಬ್ರಾಯ ಹೆಬ್ಬಾರ್‌ ಮತ್ತು ಭರತ್‌ರಾಜ್‌ ಪರ್ಕಳ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಮತ್ತು ಶ್ವೇತಕುಮಾರ ಚರಿತ್ರೆ  ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. 



ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಸೃಷ್ಟಿಕಲಾ ವಿದ್ಯಾಲಯದ ಯಕ್ಷೋತ್ಸವವನ್ನು ಜಿತೇಂದ್ರ ಕುಂದೇಶ್ವರ ಉದ್ಘಾಟಿಸಿದರು. ಛಾಯಾಪತಿ ಕಂಚಿಬೈಲ್‌, ಶಾಲಿನಿ ಜಗದೀಶ್‌, ಸುಬ್ರಾಯ ಹೆಬ್ಬಾರ್‌ ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top