ಮಂಗಳೂರು: ಲೇಖಕಿ ಡಾ ಅರುಣಾ ನಾಗರಾಜ್ ರವರ ಅರಿಷಡ್ವೈರಿಗಳ ಗೊಂದಲಾಪುರದಾಚೆ ಎಂಬ ಚಿಂತನ ಸಂಕಲನವು ಇತ್ತೀಚೆಗೆ ಮಂಗಳೂರಿನ ದೀಪಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು.
ಕೃತಿ ಬಿಡುಗಡೆ ಮಾಡಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ ಪ್ರಮೀಳಾ ಮಾಧವ್ ರವರು, ಅರಿಷಡ್ವೈರಿಗಳ ಗೊಂದಲಾಪುರ ದಾಚೆಯಂತಹ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು. ಅಂತೆಯೇ ಡಾ ಅರುಣಾರವರಂತಹ ಚಿಂತಕಿಯರು ಇನ್ನಷ್ಟು ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮೇಶ್ ಕೃಷ್ಣ ಶೇಟ್‌ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆರ್‌ಪಿಎಲ್ ನ ನಿವೃತ್ತ ಮಹಾಪ್ರಬಂಧಕಿ ಶ್ರೀಮತಿ ವೀಣಾ ಟಿ ಶೆಟ್ಟಿಯವರು ಕೃತಿಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ ಎಂದರು. ಪತ್ರಕರ್ತೆ ಡಾ. ಮಾಲತಿಶೆಟ್ಟಿ ಮಾಣೂರು ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆಎಂಸಿಯ ಖ್ಯಾತ ವೈದ್ಯೆ ಡಾ ಪ್ರಿಯಾಂಕಾ ಅರುಣ್ ಶಿರಾಲಿಯವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿ ಗಳ ಅವಶ್ಯಕತೆಯನ್ನು ತಿಳಿಸಿದರು. ವಕೀಲರಾದ ಶ್ರೀಮತಿ ಪುಷ್ಪಲತಾ ಯು.ಕೆ ಇವರು ಡಾ ಅರುಣಾ ನಾಗರಾಜ್‌ರವರ ಬಹುಮುಖ ಪ್ರತಿಭೆಯನ್ನು ಕೊಂಡಾಡಿದರು.
ದೈವಜ್ಞ ಸೌರಭ ಮಾಸ ಪತ್ರಿಕೆಯ ಪ್ರಶಾಂತ್ ಶೇಟ್ ರವರು ಸಮಾಜ ಇಂತಹ ಕೃತಿಗಳನ್ನು ಪ್ರೋತ್ಸಾಹಿಸಬೇಕೆಂದರು. ಸಿಎ ಕಿರಣ್ ಶೇಟ್ ರವರು ಲೇಖಕಿಯಿಂದ ಇಂತಹ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಶುಭಕೋರಿದರು.
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಯ ನಿವೃತ್ತ ಅಧೀಕ್ಷಕರಾದ ನಾಗರಾಜ್ ಶೇಟ್, ಮಂಜುನಾಥ್ ಶೇಟ್ ಎಂ.ಟೆಕ್ ಇವರು ಸಹಕರಿಸಿದರು. ಶ್ರೀಮತಿ ಸಿಂಧೂ ಮಂಜುನಾಥ್ ಬಿ ಇ ಇವರು ವಂದಿಸಿದರು. ಅನಂತರ ಲೇಖಕಿಯ ಮೊಮ್ಮಗ ಜನಿತ್ ಎಂ ಶೇಟ್ ಇವನ ಐದನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ