ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಭಾಗವತ ಲೀಲಾವತಿ ಬೈಪಾಡಿತ್ತಾಯ ಅವರಿಗೆ ಯಕ್ಷ ಮಂಜುಳಾ ಬಳಗದಿಂದ ಸಮ್ಮಾನ

Upayuktha
0

ಮಂಗಳೂರು: ಯಕ್ಷಗಾನದ ದಂತಕಥೆ, ಅಪೂರ್ವ ದಂಪತಿ, ಏಕೈಕ ವ್ಯವಸಾಯೀ ಭಾಗವತರು ಲೀಲಕ್ಕನವರಿಗೆ ಕದ್ರಿಯ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಬಳಗದಿಂದ ಗೌರವ ಸನ್ಮಾನ- ತಲೆಕಳದ ಅವರ ಸ್ವಗೃಹದಲ್ಲಿ ನೆರವೇರಿತು.


ಲೀಲಾವತಿ ಬೈಪಾಡಿತ್ತಾಯರು ಯಕ್ಷಗಾನ ರಂಗದಲ್ಲೇ ಅದ್ಭುತ ಪ್ರತಿಭೆ. ತೆಂಕು-ಬಡಗು ಕಾರ್ಯವ್ಯಾಪ್ತಿ ಯಲ್ಲೂ ಮಿಂಚಿದ ದೈತ್ಯ ಯುಕ್ತ ನಾರೀ ಶಕ್ತಿ. ಹತ್ತು ವರ್ಷಗಳ ಕಾಲ ಯಕ್ಷ ಮಂಜಳಾ ತಂಡದ ಭಾಗವತರಾಗಿ, ಆಕಾಶವಾಣಿ ತಂಡದ ಭಾಗವತರಾಗಿ ಮಾರ್ಗದರ್ಶನ ಮಾಡಿದವರು. ನ ಭೂತೋ ನ ಭವಿಷ್ಯತಿ ಎಂಬ ದಾಖಲೆ ನಿರ್ಮಿಸಿದ ಏಕೈಕ ಮಹಿಳೆ, ಈ ಹಿಂದೆಯೂ ಇಲ್ಲ. ಇನ್ನು ಬರುವುದೂ ಇಲ್ಲ. ಸಂಗೀತದಿಂದ ಆರಂಭಿಸಿ, ಗಂಡ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಗುರುತ್ವದಲ್ಲಿ ಬೆಳೆದು- ರಂಗವನ್ನು ಬೆಳಗಿಸಿದ ಮಾತೃ - ಸಹೋದರಿ ಸ್ವರೂಪಿ ಲೀಲಕ್ಕನವರಿಗೆ ಪ್ರಶಸ್ತಿ ಬಂದಿದ್ದು ನಮಗೇ ಬಂದಷ್ಟು ಹರ್ಷಿಸುತ್ತೇವೆ ಎ೦ದು ಯಕ್ಷ ಮಂಜುಳಾದ ಅಧ್ಯಕ್ಷೆ ಕಲಾವಿದೆ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರರು ಲೀಲಕ್ಕನನ್ನು ಅವರ ತಲೆಕಳ ದಸ್ವಗೃಹದಲ್ಲಿ ಸನ್ಮಾನಿಸುತ್ತಾ ಗುಣಗಾನ ಮಾಡಿದರು.



ಸಂಸ್ಥೆಯ ನಿರ್ದೇಶಕ- ಯಕ್ಷ ಗುರು ವರ್ಕಾಡಿ ರವಿ ಅಲೆವೂರಾಯರು ಮಾತನಾಡಿ, ಅನೇಕ ಪ್ರಸಂಗಗಳನ್ನು ಕಂಠಸ್ಥವಾಗಿಸಿಕೊಂಡು ಸಾಂಪ್ರದಾಯಿಕವಾಗಿ ಹಾಡಬಲ್ಲ ಕಲಾವಿದೆ ಲೀಲಮ್ಮನವರು, ಯಕ್ಷಗಾನ ರಂಗ ಮರೆಯದ ಕಲಾವಿದೆಯಾಗಿದ್ದಾರೆ. ಅನೇಕ ಮಂದಿ ಶಿಷ್ಯವೃಂದವನ್ನು ಸಿದ್ಧಪಡಿಸಿ ಯಕ್ಷಗಾನಕ್ಕೆ ನೀಡಿ ಮುಂದಿನ ತಲೆಮಾರಿಗೂ ಯಕ್ಷಗಾನವನ್ನು ತಲುಪಿಸಿದ ಕೀರ್ತಿ ಅವರದ್ದು, ಅವರ ಸಾಧನಾ ಕ್ಷೇತ್ರಕ್ಕೆ ಒಂದು ವಿಶೇಷ. ಮನ್ನಣೆ ದೊರೆತಿರುವುದು ನಮಗೆಲ್ಲಾ ಹೃದಯ ತುಂಬಿ ಬಂದಿದೆ. ಅವರಿಗೆ ಯಶಸ್ಸಾಗಲಿ. ಯಕ್ಷ ದಂಪತಿಗೆ ಶ್ರೇಯಸ್ಸಾಗಲಿ ಎಂದು ಅಭಿನಂದಿಸಿ ಶುಭ ಕೋರಿದರು.


ಅರುಣಾ ಸೋಮಶೇಖರ್ ರವರೂ ಲೀಲಕ್ಕ ನ ಗುಣಗಾನ ಮಾಡಿದರು. ಪೂರ್ಣಿಮಾ ಪ್ರಶಾಂತ ಶಾಸ್ತ್ರೀ ನಿರ್ವಹಿಸಿದರು. ಅನುಪಮಾ ಅಡಿಗ. ರೂಪಾ ರಾಧಾಕೃಷ್ಣ ರಾವ್ ಶುಭಾಶಂಸನೆಗೈದರು. ಹರಿನಾರಾಯಣ ಬೈಪಾಡಿತ್ತಾಯ, ಪ್ರಭಾಕರ ರಾವ್ ಪೇಜಾವರ, ಮಧುಸೂದನ ಅಲೆವೂರಾಯ ವರ್ಕಾಡಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top