ಉಜಿರೆ: ವಾಲ್ಮೀಕಿ ಈ ಜಗತ್ತು ಕಂಡ ಅಪೂರ್ವ ಕವಿ. ಆದಿ ಕವಿ ಎಂಬ ಹೆಗ್ಗಳಿಕೆ ಇವರಿಗೆ ಇದೆ. ದುಷ್ಟ ಸ್ವಭಾವದ ಮನುಷ್ಯ ಹೇಗೆ ಉತ್ತಮನಾಗಿ ಬದಲಾಗಬಹುದು ಎನ್ನುವುದಕ್ಕೆ ವಾಲ್ಮೀಕಿ ಉತ್ತಮ ಉದಾಹರಣೆ. ರಾಮಾಯಣ ಎನ್ನುವ ಐತಿಹಾಸಿಕ ಮಹಾಕಾವ್ಯದ ರಚನೆಯ ಮೂಲಕ ಸಾವಿರಾರು ಕವಿಗಳಿಗೆ ಆದರ್ಶರಾಗಿದ್ದರೆ ಹಾಗೂ ಮಾರ್ಗದೀಪಕರಾಗಿದ್ದಾರೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಹೇಳಿದರು.
ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ , ಸಂಸ್ಕೃತ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಾಲ್ಮೀಕಿ ಜಯಂತಿ ದಿನಾಚರಣೆ ಪ್ರಯುಕ್ತ ನಡೆದ ಅಮರ ಕವಿ ವಾಲ್ಮೀಕಿ ಎಂಬ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ವಿದ್ಯಾರ್ಥಿನಿ ಶ್ರುತಾ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ