ಸುರತ್ಕಲ್: ಶ್ರೀ ಸ್ಫೂರ್ತಿ ಧ್ವನಿ ಮಹಿಳಾ ಮತ್ತು ಯುವ ಸೇವಾ ಟ್ರಸ್ಟ್ (ರಿ) ಕುಳಾಯಿ ಇದರ 5ನೆ ವಾರ್ಷಿಕೋತ್ಸವವನ್ನು ಬಾಲ ಸಂರಕ್ಷಣಾ ಕೇಂದ್ರ, ಕುತ್ತಾರ್ ಪದವು ಇಲ್ಲಿ ಆಚರಿಸಲಾಯಿತು. ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಶ್ರೀ ಪಿ. ಅನಂತ ಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಯಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂತಹ ಸಂಘಟನೆಗಳು ನೀಡುವ ಕಾರ್ಯಕ್ರಮಗಳು ಬಹಳ ಅಗತ್ಯ ಎಂದರು.
ನ್ಯಾಯವಾದಿ, ಯಕ್ಷಗಾನ ಕಲಾವಿದ ಪಿ. ಸಂತೋಷ್ ಐತಾಳ್ ಅಧ್ಯಕ್ಷತೆ ವಹಿಸಿದ್ದು, ಸ್ಫೂರ್ತಿ ಧ್ವನಿ ಟ್ರಸ್ಟ್ ಇನ್ನೂ ಶೈಶವಾವಸ್ಥೆಯಲ್ಲಿದ್ದರೂ ಬಹಳಷ್ಟು ಮೌಲಿಕ ಕಾರ್ಯಕ್ರಮಗಳ ಮೂಲಕ ಕ್ರಿಯಾಶೀಲವಾಗಿದೆ ಎಂದರು.
ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ವತ್ಸಲಾ ಎನ್ ಭಟ್ ಪ್ರಸ್ತಾವಿಸಿದರು. ಶ್ರೀಮತಿ ಶ್ಯಾಮಲಾ ಸಂತೋಷ ಐತಾಳ್ ಸ್ವಾಗತಿಸಿ, ಸುಜಾತಾ ಉದಯಕುಮಾರ್ ವಂದಿಸಿದರು. ಶೈಲಜಾ ಪುದುಕೋಳಿ ನಿರೂಪಿಸಿದರು. ಶ್ರೀ ರಾಮಚಂದ್ರ ಹೆಬ್ಬಾರ್ ಉಪಸ್ಥಿತರಿದ್ದರು. ಶ್ರೀಮತಿ ಸತ್ಯ ಕವೀಶ್, ಶ್ರೀಮತಿ ವನಜಾಕ್ಷಿ, ಶ್ರೀಮತಿ ಸುಧಾ ಭಂಡಾರಿ, ಶ್ರೀಮತಿ ವಿದ್ಯಾ, ತುಳಸಿ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ವನಿತಾ ರಾವ್, ಶ್ರೀಮತಿ ಮೀನಾಕ್ಷಿ, ವಸಂತಿ, ರಕ್ಷಾ ಇವರು ಇಲ್ಲಿನ ವಿದ್ಯಾರ್ಥಿಗಳಿಗೆ ಕೇಂದ್ರದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಮನೋರಂಜನ ಕಾರ್ಯಕ್ರಮ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ