ಪೇಜಾವರ ಶ್ರೀಗಳಿಂದ ನೀಲಾವರ ಗೋಶಾಲೆಗೆ ಏಳನೇ ವರ್ಷದ ಪಾದಯಾತ್ರೆ

Upayuktha
0


ಉಡುಪಿ: ನಮ್ಮ ಬದುಕು ತಾಪವಾಗದೇ ತಪಸ್ಸಾಗಬೇಕು. ನಿತ್ಯ ಜೀವನದಲ್ಲಿ ನಮ್ಮ ನಮ್ಮ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳಲು ಹೆಣಗಾಡ್ತೇವೆ. ಇದೇ ತಾಪ. ಅದೇ ಕಾಡಿನಲ್ಲಿ ಋಷಿಮುನಿಗಳು ಲೋಕದ ಒಳಿತಿಗಾಗಿ ತಾವು ಕಷ್ಟಪಟ್ಟ ಲೋಕದೊಳಿತಿಗೆ ಹಂಬಲಿಸಿದರು, ಅದೇ ತಪಸ್ಸು. ನಮ್ಮ ಜೀವನವೂ ತಪಸ್ಸಾಗಬೇಕು. ಹಾಗಾಗಬೇಕಾದರೆ ಕೇವಲ ನಮ್ಮ ಹಿತಕ್ಕಾಗಿ ಮಾತ್ರವಲ್ಲದೇ ಪರರ ಹಿತದ ಬಗ್ಗೆಯೂ ಚಿಂತಿಸಿ ಶ್ರಮಿಸಲು ಯತ್ನಿಸಬೇಕು. ಅಂಥ ಮನಸ್ಥಿತಿ ನಮ್ಮದಾಗಲು ಸಾತ್ವಿಕ ಚಿಂತನೆ ಸಾತ್ವಿಕ ಕಾರ್ಯಗಳಲ್ಲಿ ಪ್ರವೃತ್ತಿ ಭಗವಂತನಲ್ಲಿ ಭಕ್ತಿ ಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.



ಅಯೋಧ್ಯಾ ರಾಮಮಂದಿರ ವಿಶ್ವಸ್ಥರಾದ ಶ್ರೀ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾನುವಾರ ತಮ್ಮ ಮುನ್ನೂರಕ್ಕೂ ಅಧಿಕ ಶಿಷ್ಯರು ಭಕ್ತರೊಂದಿಗೆ ಉಡುಪಿ ಶ್ರೀ ಕೃಷ್ಣಮಠದಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ ನಡೆಸಿದರು.




ಪಾದಯಾತ್ರೆಯಂಥವುಗಳನ್ನು ಮಾಡುವುದರಿಂದ ಭಗವದ್ಭಕ್ತಿ, ಸಾತ್ವಿಕರ ಸಹವಾಸ ನಮ್ಮ ಸುತ್ತಮುತ್ತಲ ಪರಿಸರ ಪ್ರಕೃತಿಗಳ ಬಗ್ಗೆ ತಿಳಿವು, ವಿವಿಧ ತೀರ್ಥಕ್ಷೇತ್ರಗಳ ಸಂದರ್ಶನದಿಂದ ಸತ್ಫಲ ಪ್ರಾಪ್ತಿ, ಸಾತ್ವಿಕ ಪ್ರಜ್ಞೆಯ ಜಾಗೃತಿ, ವಿವಿಧ ಬಗೆಯ ಜನ ಜನಜೀವನದ ಪರಿಚಯ ಇತ್ಯಾದಿಗಳು ಸಾಧ್ಯ. ಹಾಗಾದಾಗ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರವಾಗಿ, ನಮಗೆ ಒಳಿತಿಗಾಗಿ ಮಾತ್ರವೇ ಪರರ ಒಳಿತಿಗಾಗಿಯೂ ಪ್ರವೃತ್ತರಾಗುವ ಅಪೇಕ್ಷೆಗಳು ಮೂಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಭಕ್ತರು ಶಿಷ್ಯರೊಂದಿಗೆ ದೇಶದ ನೂರಾರು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top