ಸ್ವದೇಶಿ ಮಾರ್ಟ್ ಡಿಜಿಟಲ್ ವೇದಿಕೆ ಲೋಕಾರ್ಪಣೆ ಮಾಡಿದ ಸಂಸದ ತೇಜಸ್ವಿ ಸೂರ್ಯ

Upayuktha
0

ನಮ್ಮೂರಿನ ಉತ್ಪನ್ನಗಳ ಖರೀದಿಗಾಗಿ ಪುತ್ತೂರಿನ ಪ್ರಣವ ಭಟ್ ನೇತೃತ್ವದಲ್ಲಿ ಹೊಸ ವೇದಿಕೆ 



ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಸಮಯದಲ್ಲಿ ಸಾಕಷ್ಟು ಮಂದಿ ಸ್ವದೇಶಿ ವಸ್ತುಗಳನ್ನು ತಯಾರಿಸಲು ಮುಂದೆ ಬಂದು ಈಗಲೂ ಅದರಲ್ಲೇ ಜೀವನ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಮತ್ತಷ್ಟು ಪ್ರೋತ್ಸಾಹಿಸಲು ಶಕ್ತಿ ತುಂಬಲು ಪ್ರಣವ ಭಟ್ ಅವರ ನೇತೃತ್ವದಲ್ಲಿ ನಮ್ಮ ಊರಿನಲ್ಲೇ ನೈಸರ್ಗಿಕವಾಗಿ ತಯಾರಾಗುವ ನಮ್ಮ ಮನೆಗಳಲ್ಲಿ ಕೈಯಲ್ಲೇ ತಯಾರಿಸುವ ವಸ್ತುಗಳನ್ನು ಒಂದೇ ಕಡೆ ಸಿಗುವಂತೆ ಮಾಡಲು ಸ್ವದೇಶಿ ಮಾರ್ಟ್ (Swadeshi Mart) ಎನ್ನುವ ಅತೀ ದೊಡ್ಡ ಡಿಜಿಟಲ್ ವೇದಿಕೆ ಸಿಧ್ಧವಾಗುತ್ತಿದೆ.


ಅಡಿಕೆ ಉತ್ಪನ್ನಗಳು, ರಾಗಿ ಉತ್ಪನ್ನಗಳು, ಕೈಯಲ್ಲೇ ತಯಾರಿಸಿದ ಗೊಂಬೆಗಳು, ಗಾಣದ ಎಣ್ಣೆ, ನೈಸರ್ಗಿಕ ಸೋಪು ಹೀಗೆ ವಿವಿಧ ವೈವಿಧ್ಯಮಯ ಉತ್ಪನ್ನಗಳು ಜೊತೆಗೆ ಪ್ರತಿಯೊಬ್ಬರು ಸ್ವ ಉದ್ಯೋಗದಿಂದ ಜೀವನ ಕಟ್ಟಿಕೊಂಡವರು ಅವರಿಗೆ ಇದೊಂದು ವೇದಿಕೆಯಾಗಿ ಕರ್ನಾಟಕದಾದ್ಯಂತ ಮಾರಾಟ ಮಾಡಲು ಸಹಾಯ ಮಾಡುವ ಒಂದು ಸಣ್ಣ ಪ್ರಯತ್ನ ಸ್ವದೇಶ ಮಾರ್ಟ್. 


ಇದು ಅತೀ ಶೀಘ್ರದಲ್ಲಿ ನಿಮ್ಮ ಕೈಗೆ ಸಿಗಲಿದೆ. ಸ್ವದೇಶಿ ಮಾರ್ಟ್ ವೆಬ್‌ಸೈಟ್ ಬೆಂಗಳೂರಿನಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಅವರು ಉದ್ಘಾಟನೆ ಮಾಡಿದ್ದಾರೆ. ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ ಸ್ವದೇಶಿ ವಸ್ತುಗಳನ್ನು ಖರೀದಿಸಿ ಬಳಸುವ ಈ ಅಭಿಯಾನದಲ್ಲಿ ನೀವು ಕೂಡ ಪಾಲ್ಗೊಳ್ಳಿ ಎಂದು ಸ್ವದೇಶಿ ಮಾರ್ಟ್ ಪ್ರವರ್ತಕರು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top